ADVERTISEMENT

ವಿಚಿತ್ರ ಕಾಯಿಲೆಗೆ ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:25 IST
Last Updated 2 ಡಿಸೆಂಬರ್ 2013, 8:25 IST
ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದಾಗಿ ಮೃತಪಟ್ಟ ಕುರಿಗಳನ್ನು ವೀಕ್ಷಿಸುತ್ತಿರುವ ತಾಲ್ಲೂಕು ಪಶು ವೈದ್ಯಾಧಿಕಾರಿಗಳು.
ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದಾಗಿ ಮೃತಪಟ್ಟ ಕುರಿಗಳನ್ನು ವೀಕ್ಷಿಸುತ್ತಿರುವ ತಾಲ್ಲೂಕು ಪಶು ವೈದ್ಯಾಧಿಕಾರಿಗಳು.   

ಹಾವೇರಿ: ವಿಚಿತ್ರ ಕಾಯಿಲೆಗೆ ತುತ್ತಾಗಿ ಒಂದು ವಾರದಲ್ಲಿ ನೂರಾರು ಕುರಿಗಳು ಮೃತಪಟ್ಟ ಘಟನೆ ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕುರಿಗಳು ಸಾಯುತ್ತಿರುವುದು ಯಾವ ಕಾಯುಲೆಗೆ ಎಂಬುದು ಕುರಿಗಾರರಿಗೂ ಗೊತ್ತಾಗುತ್ತಿಲ್ಲ.

ಬೆಳಿಗ್ಗೆ ಚನ್ನಾಗಿ ಮೆಯ್ದು, ಅಡ್ಡಾಡಿಕೊಂಡಿರುವ ಕುರಿಗಳು ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಕುಸಿದು ಸಾವನ್ನಪ್ಪುತ್ತಿವೆ. ಇದರಿಂದ ಕುರಿಗಾರರು ಕಂಗಾಲಾಗಿದ್ದಾರೆ.

ಇಲ್ಲಿವರೆಗೆ ಈ ವಿಚತ್ರ ಕಾಯಿಲೆಗೆ ಗ್ರಾಮದ ಶಂಕರಪ್ಪ ಮಾಗೋಡವರ ೬೨, ವೀರಪ್ಪ ಕಿತ್ತೂರವರ ೧೮, ಸೋಮಪ್ಪ ಕುಮ್ಮೂರವರ ೧೨ ಕುರಿಗಳು ಸಾವನ್ನಪ್ಪಿವೆ.

ಗ್ರಾಮಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಕುರಿಗಳ ಪರೀಕ್ಷೆ ಮಾಡಿದ್ದಾರೆ. ಆದರೆ, ಕುರಿಗಳ ಸಾವಿಗೆ ಕಾರಣ ಎಂಬುದು ಪತ್ತೆಯಾಗಿಲ್ಲ. ಸತ್ತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕುರಿಯ ದೇಹದ ಕೆಲ ಭಾಗಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.