ADVERTISEMENT

ಸರ್ಪದೋಷ ಪರಿಹಾರ: ಮತ್ತೆ ಬಂದ ದೃಷ್ಟಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 6:05 IST
Last Updated 20 ಆಗಸ್ಟ್ 2012, 6:05 IST

ಬ್ಯಾಡಗಿ: ಕಳೆದ ಆ.14ರಂದು ರಾಣೆ ಬೆನ್ನೂರ ತಾಲ್ಲೂಕು ಹಳೆ ಹೊನ್ನತ್ತಿ ಸಮೀಪ ಜೆಸಿಬಿ ಯಂತ್ರಕ್ಕೆ ಸಿಲುಕಿ ಅರೆ ಜೀವವಾಗಿದ್ದ ನಾಗರಹಾವನ್ನು ಕೊಂದು ಸುಟ್ಟು ಹಾಕಿದ ಬಳಿಕ ದೃಷ್ಟಿ ಕಳೆದುಕೊಂಡಿದ್ದ ತಾಲ್ಲೂಕಿನ ಮೋಟೆ ಬೆನ್ನೂರ ಗ್ರಾಮದ ವ್ಯಕ್ತಿಯೊಬ್ಬನಿಗೆ ಭಾನುವಾರ ಸಂಜೆ ಮರಳಿ ದೃಷ್ಟಿ  ಬಂದಿರುವ ವಿಸ್ಮಯಕಾರಿ ಘಟನೆ ಯೊಂದು ನಡೆದಿದೆ. 

 ಸುದ್ದಿ ಜನರಿಂದ ಜನರಿಗೆ ಹರಡು ತ್ತಿದ್ದಂತೆ ಆತನ ಮನೆಯ ಮುಂದೆ ಸೇರಿದ ಜನರು ಕುತೂಹಲದಿಂದ ವೀಕ್ಷಿ ಸಿದರು.

ದೃಷ್ಟಿ ಕಳೆದು ಕೊಂಡ ವ್ಯಕ್ತಿ ಶ್ರೀಕಾಂತ ಹೊಟ್ಟೆಪ್ಪಗೌಡ್ರ ಎನ್ನಲಾಗಿದ್ದು, ಶನಿವಾರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ರಾಮನಸರ ಹುಂಚದಕಟ್ಟಿ ಗ್ರಾಮದ ನಾಗಮಂಡಲಕ್ಕೆ ಕುಟುಂಬ ಪರಿವಾರ ಸಮೇತ ಭೇಟಿ ಮಾಡಿ ಭಕ್ತಿ ಯಿಂದ ಪೂಜೆ ಸಲ್ಲಿಸಿದಾಗ ಸ್ವಾಮೀಜಿ ಯವರ ವಾಣಿಯೊಂದು ನಾಗರ ಹಾವನ್ನು ಸುಟ್ಟ ಚಿತಾಭಸ್ಮವನ್ನು ನದಿಗೆ ಅರ್ಪಣೆ ಮಾಡಿ ದೇವಸ್ಥಾನ ನಿರ್ಮಿಸುವ ಸಂಕಲ್ಪವನ್ನು ಕೈಕೊಂಡಲ್ಲಿ ದೃಷ್ಠಿ ಮರಳಿ ಬರಲಿದೆ ಎಂದು ಸಲಹೆ ನೀಡಿತ್ತು ಎನ್ನಲಾಗಿದೆ.

ವಾಪಸ್ ಮರಳಿದ ಶ್ರೀಕಾಂತ ವಾಣಿಯಂತೆ ಭಾನುವಾರ ಕಾಯಕ ನೆರೆವೇರಿಸಿ ಅನ್ನಸಂತರ್ಪಣೆ ಕೈಕೊಂಡ ಹಿನ್ನೆಲೆಯಲ್ಲಿ ದೃಷ್ಟಿಮರಳಿ ಬಂದಿತೆಂದು ಪತ್ರಿಕೆಗೆ ಮಾಹಿತಿ ನೀಡಿದರು.

ಜನಜಂಗುಳಿ: ಜೆಸಿಬಿ ಯಂತ್ರಕ್ಕೆ ಸಿಲುಕಿ ಅರೆ ಜೀವವಾಗಿದ್ದ ನಾಗರ ಹಾವನ್ನು ಕೊಂದು ಸುಟ್ಟು ಹಾಕಿದ  ಐದು ದಿನದ ಬಳಿಕ ಶ್ರೀಕಾಂತನಿಗೆ ದೃಷ್ಟಿ ಮರಳಿ ಬಂದಿರುವ ಸುದ್ದಿ ಹರಡು ತ್ತಿದ್ದಂತೆ ಗ್ರಾಮದ ಹಾಗೂ ಸುತ್ತ ಮುತ್ತಲಿನ ಜನತೆ ಆತನನ್ನು ಕುತೂ ಹಲದಿಂದ ವೀಕ್ಷಿಸುತ್ತಿರುವುದು ಕಂಡು ಬಂದಿತು.

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಯೂ ಇಂತಹ ಘಟನೆಗಳು ಸತ್ಯವೇ ಎನ್ನುವ ಪ್ರಶ್ನೆಗೆ ನೈಜವಾದ ಉತ್ತರ ಮಾತ್ರ ಸಿಗದೆ ಇರುವುದು ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಇದರ ಸತ್ಯಾಸತ್ಯತೆಯನ್ನು ಅರಿಯು ವುದು ಮುಖ್ಯವಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.