ಹಾವೇರಿ: ಜಿಲ್ಲೆಯಲ್ಲಿ ಶನಿವಾರ 127 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 200 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ತಾಲ್ಲೂಕುವಾರು ವಿವರ
ಬ್ಯಾಡಗಿ–10, ಹಾನಗಲ್–9, ಹಾವೇರಿ–36, ಹಿರೇಕೆರೂರು–16, ರಾಣೆಬೆನ್ನೂರು–35, ಸವಣೂರು–2, ಶಿಗ್ಗಾವಿ ತಾಲ್ಲೂಕಿನ–19 ಮಂದಿಗೆ ಸೋಂಕು ದೃಢಪಟ್ಟಿದೆ.
ಬ್ಯಾಡಗಿ–11, ಹಾನಗಲ್–37, ಹಾವೇರಿ–50, ಹಿರೇಕೆರೂರು–66, ರಾಣೆಬೆನ್ನೂರು–29, ಸವಣೂರು–6, ಶಿಗ್ಗಾವಿ ತಾಲ್ಲೂಕಿನ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮರಣದ ವಿವರ
ಬ್ಯಾಡಗಿ ನಗರದ 48 ವರ್ಷದ ಪುರುಷ, ಹಾವೇರಿ ನಗರದ ನಾಗೇಂದ್ರನಮಟ್ಟಿಯ 63 ವರ್ಷದ ಪುರುಷ ಹಾಗೂ ಹಾನಗಲ್ ತಾಲ್ಲೂಕಿನ ಬೈಚವಳ್ಳಿ ಗ್ರಾಮದ 43 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟು, ಮರಣ ಹೊಂದಿರುವುದನ್ನು ಶನಿವಾರ ದೃಢೀಕರಿಸಲಾಗಿದೆ.
ಕೋವಿಡ್ ಅಂಕಿಅಂಶ
ಜಿಲ್ಲೆಯಲ್ಲಿ ಒಟ್ಟು:8408
ಸಕ್ರಿಯ ಪ್ರಕರಣ:1440
ಗುಣಮುಖ:6812
ಸಾವು:156
***
ಈ ದಿನದ ಏರಿಕೆ
ಹೊಸ ಪ್ರಕರಣ:127
ಗುಣಮುಖ:200
ಸಾವು:3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.