ADVERTISEMENT

ಸರ್ಕಾರಗಳಿಂದಲೇ ಜಾತಿ ವ್ಯವಸ್ಥೆ ಸೃಷ್ಟಿ: ಶ್ರೀಗಳ ವಿಷಾದ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 10:20 IST
Last Updated 27 ಜನವರಿ 2018, 10:20 IST
ಶಿಗ್ಗಾವಿಯಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಮಾಜ ಆಯೋಜಿಸಿದ್ದ ಗುರುವಂದನೆ ಮತ್ತು ಗುರು ಪುರ ಪ್ರವೇಶ ಸಮಾರಂಭದಲ್ಲಿ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದ ಶ್ರೀಗಳು ಆಶೀರ್ವಚನ ನೀಡಿದರು
ಶಿಗ್ಗಾವಿಯಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಮಾಜ ಆಯೋಜಿಸಿದ್ದ ಗುರುವಂದನೆ ಮತ್ತು ಗುರು ಪುರ ಪ್ರವೇಶ ಸಮಾರಂಭದಲ್ಲಿ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದ ಶ್ರೀಗಳು ಆಶೀರ್ವಚನ ನೀಡಿದರು   

ಶಿಗ್ಗಾವಿ: ‘ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಬೇಕಾದ ಸರ್ಕಾರಗಳಿಂದಲೇ ಜಾತಿ ವ್ಯವಸ್ಥೆ ಸೃಷ್ಟಿಯಾಗುತ್ತಿದೆ’ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬ್ರಾಹ್ಮಣ ಸಮಾಜ ಇತ್ತೀಚಗೆ ಆಯೋಜಿಸಿದ್ದ ‘ಗುರು ವಂದನೆ ಮತ್ತು ಗುರುಪುರ ಪ್ರವೇಶ ಸಮಾರಂಭ’ದಲ್ಲಿ ಆಶೀರ್ವಚನ  ಅವರು ಮಾತನಾಡಿದರು.

‘ರಾಜಕೀಯ ಪಕ್ಷಗಳು ಮತ ಪಡೆಯು ಆಸೆಗಾಗಿ ಮುಗ್ದ ಜನತೆಯಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕುತ್ತಿವೆ’ ಎಂದು ದೂರಿದರು. ‘ದೇಶದ ಅಭಿವೃದ್ಧಿಗೆ ಸಾಮರಸ್ಯ ಮೂಡಬೇಕಿದೆ. ನಾವೆಲ್ಲಾ ಒಂದು ಎಂಬ ಭಾವನೆ ಮೂಡಿದಾಗ ದೇಶದ ಏಳಿಗೆ ಸಾಧ್ಯ’ ಎಂದು ಸಲಹೆ ನೀಡಿದರು.

ADVERTISEMENT

ಸಮಾರಂಭದ ಪೂರ್ವದಲ್ಲಿ ಶ್ರೀಗಳನ್ನು ವಿವಿಧ ವಾದ್ಯ ಮೇಳ, ಪೂರ್ಣಕುಂಬ ಮೇಳದೊಂದಿಗೆ ಪಟ್ಟಣದ ಅಂಚೆ ಕಚೇರಿ ವೃತ್ತದಿಂದ ಶೋಭಾಯಾತ್ರೆ ಮೂಲಕ ದೇಸಾಯಿ ಗಲ್ಲಿ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಶ್ರೀಗಳ ಪಾದಪೂಜೆ, ಮುದ್ರಾಧಾರಣೆ, ಮೂಲ ರಾಮದೇವರ ವಿಶೇಷ ಪೂಜೆ, ಮಹಾಪ್ರಸಾದ ಕಾರ್ಯಕ್ರಮ ನಡೆಯಿತು.

ಮುಖಂಡ ಆರ್.ಆರ್.ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಟಿ.ವಿ.ದೇಶಪಾಂಡೆ, ಬೋಧರಾವ್ ಬೆಳಗಲಿ, ಜಯಣ್ಣ ಕುಲಕರ್ಣಿ, ಪ್ರಹ್ಲಾದರಾವ್ ಬೆಳಗಲಿ, ಎಂ.ಎಲ್.ದೇಶಪಾಂಡೆ, ಕೆ.ಜಿ.ಹುರಳಿಕೊಪ್ಪಿ, ಎಸ್.ಪಿ. ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.