ಶಿಗ್ಗಾವಿ: ‘ಬದುಕಿನ ಮೌಲ್ಯ ಹೆಚ್ಚಳಕ್ಕೆ ಕಾಯಕ ನಿಷ್ಠೆ ಕಾರಣವಾಗಿದ್ದು, ಅದರಿಂದ ತಾರತಮ್ಯ ಭಾವನೆ, ವ್ಯಾಜ್ಯಗಳು ದೂರಾಗುವ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯವಿದೆ’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದ ಮತ್ತು ಬಸವ ಸೇವಾ ಸಮಿತಿ ವತಿಯಿಂದ ಬುಧವಾರ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಬಸವಣ್ಣನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶರಣ ಸಮುದಾಯದ ಬೆಳವಣಿಗೆಯಲ್ಲಿ ಬಸವಣ್ಣನವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಅವರಂತಹ ಮಹಾನ್ ಸಮಾಜ ಸುಧಾರಕರು ಮತ್ತು ಕವಿಗಳನ್ನು ಶರಣ ಸಮುದಾಯ ಸೃಷ್ಟಿಸಿತು. ಅವರ ನಂಬಿಕೆಗಳು ಮತ್ತು ಬೋಧನೆಗಳು ಅದ್ಭುತ’ ಎಂದರು.
ಮುಖಂಡರಾದ ರಾಜಣ್ಣ ವಿರಕ್ತಮಠ, ಸಂಗಪ್ಪ ಕಂಕಣವಾಡ, ಪವನ ಹಾವೇರಿ, ಮಂಜುನಾಥ ಮಳ್ಳೂರು, ಈರಣ್ಣ ಅಂಕಲಕೋಟಿ, ಬಸವರಾಜ ಹಿರೇಮಠ, ರಮೇಶ ಹೊಟ್ಟುರ, ಸುರೇಶ ಹೊಟ್ಟುರ, ಮಾಲತೇಶ ಯಲಿವಿಗಿ, ಲಕ್ಷ್ಮಣ ಕಬನೂರ, ರಮೇಶ ವನಹಳ್ಳಿ, ಮುರಿಗೆಪ್ಪ ಕಾರಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.