ADVERTISEMENT

‘ಸುರಕ್ಷತೆಗೆ ಆದ್ಯತೆ ನೀಡಿ’

ಕುರುಬರಮಲ್ಲೂರ ಗ್ರಾಮದ ಅಂಗನವಾಡಿ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 5:46 IST
Last Updated 9 ನವೆಂಬರ್ 2021, 5:46 IST
ಸವಣೂರ ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಅಂಗನವಾಡಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಸವಣೂರ ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಅಂಗನವಾಡಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ಸವಣೂರ: ಕೋವಿಡ್ ಪರಿಣಾಮ ಬಂದ್ ಆಗಿದ್ದ ಶಾಲೆಗಳು ಹಾಗೂ ಅಂಗನವಾಡಿಗಳು ಈಗ ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಶಾಲೆಗಳಲ್ಲಿ ಜೀವಕಳೆ ಬಂದಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಅನಿಲಕುಮಾರ ಹೊಂಬಳದ ಹೇಳಿದರು.

ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜರುಗಿದ ಅಂಗನವಾಡಿ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿ ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ರೋಗ ಕಡಿಮೆಯಾಗಿದೆ ಎಂದು ನಿಷ್ಕಾಳಜಿ ತೋರಬಾರದು. ಮುಂಜಾಗೃತ ಕ್ರಮ ವಹಿಸಿ ಮಕ್ಕಳ ಆರೋಗ್ಯವನ್ನು ಕಾಯ್ದುಕೊಂಡು ಶಿಕ್ಷಣ ನೀಡಲು ಮುಂದಾಗಬೇಕು. ಆಹಾರ ವಿತರಣೆ ಪೂರ್ವದಲ್ಲಿ ಶಿಕ್ಷಕರು ಗುಣಮಟ್ಟವನ್ನು ಪರೀಕ್ಷೆಮಾಡಿ ಉಣಬಡಿಸಬೇಕು ಎಂದು ಕಿವಿ ಮಾತು ನೀಡಿದರು.

ಶಿಕ್ಷಕ ವಿ.ಬಿ.ದೋಂಗಡೆ ಮಾತನಾಡಿ, ಮಕ್ಕಳ ಆರೋಗ್ಯದ ಜೋತೆಗೆ ಗುಣಮಟ್ಟದ ಶಿಕ್ಷಣ ಮುಂದುವರಿಯಲು ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ನಿರ್ದೇಶನದಂತೆ ಸುರಕ್ಷತಾ ಕ್ರಮ ಕೈಗೊಂಡು ಶಿಕ್ಷಣ ನೀಡಬೇಕು ಎಂದರು.

ADVERTISEMENT

ಗ್ರಾ.ಪಂ. ಸದಸ್ಶರಾದ ಗಂಗಪ್ಪ ದೊಡ್ಡಪೂಜಾರ, ಶಿಕ್ಷಕರಾದ ಮಂಜುನಾಥ ವಾಲ್ಮೀಕಿ, ಯುವ ಮುಖಂಡ ಗಂಗಪ್ಪ ಅಜ್ಜಣ್ಣನವರ, ಅಂಗನವಾಡಿ ಕಾರ್ಯಕರ್ತೆ ಭಾರತಿ ಮಾಸಲವಾಡ, ಸಹಾಯಕ ಕಾರ್ಯಕರ್ತೆ ಅಕ್ಕಮ್ಮ ತಳವಾರ, ಆಶಾ ಕಾರ್ಯಕರ್ತೆಯರಾದ ಗಂಗಮ್ಮ ಸಣ್ಣಪೂಜಾರ, ಚನ್ನಮ್ಮ ಗೌರಣ್ಣನವರ, ಗ್ರಾ.ಪಂ ಸಿಬ್ಬಂದಿ ಬಿ.ಎಸ್.ಅತ್ತಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.