
ಹಾನಗಲ್ ತಾಲ್ಲೂಕಿನ ಹಾವಣಗಿಯ ಆಯುರ್ವೇದ ಚಿಕಿತ್ಸಾಲಯದಲ್ಲಿ ₹10 ಲಕ್ಷ ವೆಚ್ಚದಲ್ಲಿ ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು
ಹಾನಗಲ್: ‘ತಾಲ್ಲೂಕಿನಲ್ಲಿ 13 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣಕ್ಕೆ ₹8.45 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲ್ಲೂಕಿನ ಹಾವಣಗಿ ಗ್ರಾಮದ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುಷ್ ಇಲಾಖೆ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ತಾಲ್ಲೂಕಿನಲ್ಲಿ ಶಿರಗೋಡ ಮತ್ತು ಕಲಕೇರಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ₹6.40 ಕೋಟಿ ಅನುದಾನ ದೊರಕಿಸಲಾಗಿದೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನೂರ್‌ಅಹ್ಮದ್ ಕುಲಕರ್ಣಿ, ಲತಾ ಬಡಿಗೇರ, ಮುಖಂಡರಾದ ಮಂಜು ಗೊರಣ್ಣನವರ, ಜಗದೀಶ ಬಡಿಗೇರ, ಮಾಲತೇಶ ವಾಲಿಕಾರ, ಲಕ್ಕಪ್ಪ ಮಲ್ಲಿಗಾರ, ಜಮೀರ್ಅಹ್ಮದ್ ಮುಲ್ಲಾ, ನಾಗರಾಜ ಮಲ್ಲಿಗಾರ, ಶಿವಲಿಂಗ ಕರ್ಜಗಿ, ನಾಗರಾಜ್ ಜವಳಿ, ವಿಜಯಕುಮಾರ ಅಂಗಡಿ, ಸಿಕಂದರ್ ವಾಲಿಕಾರ, ಶಿವು ತಳವಾರ, ಲಿಂಗರಾಜ ಮಡಿವಾಳರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.