ADVERTISEMENT

ರಾಣೆಬೆನ್ನೂರು | ಗಮನ ಸೆಳೆದ ಬಿದಿರಿನ ಐಫೆಲ್‌ ಗೋಪುರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 14:42 IST
Last Updated 23 ಸೆಪ್ಟೆಂಬರ್ 2023, 14:42 IST
ರಾಣೆಬೆನ್ನೂರಿನ ಹಲಗೇರಿ ವೃತ್ತದ ಮೇದಾರ ಓಣಿಯಲ್ಲಿ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘದಿಂದ 45 ನೇ ವಾರ್ಷಿಕದ ಗಜಾನನ ಉತ್ಸವದ ಅಂಗವಾಗಿ ಬಿದಿರಿನಿಂದ ನಿರ್ಮಿಸಿದ ಪ್ರಾನ್ಸ್‌ ದೇಶದ ಪ್ಯಾರಿಸ್‌ನ ಐಫೆಲ್‌ ಗೋಪುರ (Eiffel).
ರಾಣೆಬೆನ್ನೂರಿನ ಹಲಗೇರಿ ವೃತ್ತದ ಮೇದಾರ ಓಣಿಯಲ್ಲಿ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘದಿಂದ 45 ನೇ ವಾರ್ಷಿಕದ ಗಜಾನನ ಉತ್ಸವದ ಅಂಗವಾಗಿ ಬಿದಿರಿನಿಂದ ನಿರ್ಮಿಸಿದ ಪ್ರಾನ್ಸ್‌ ದೇಶದ ಪ್ಯಾರಿಸ್‌ನ ಐಫೆಲ್‌ ಗೋಪುರ (Eiffel).   

ರಾಣೆಬೆನ್ನೂರು: ಇಲ್ಲಿಯ ಹಲಗೇರಿ ವೃತ್ತದ ಮೇದಾರ ಓಣಿಯಲ್ಲಿ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘದಿಂದ 45 ನೇ ವಾರ್ಷಿಕ ಗಜಾನನ ಉತ್ಸವದ ಅಂಗವಾಗಿ ಬಿದಿರಿನಿಂದ ನಿರ್ಮಿಸಿದ ಪ್ಯಾರಿಸ್‌ನ ಐಫೆಲ್‌ ಗೋಪುರ ಮಾದರಿ ಗಮನ ಸೆಳೆಯುತ್ತಿದೆ.

ಮೇದಾರ ಯುವ ಕಲಾವಿದರಾದ ರವಿ ಮೇದಾರ ಮತ್ತು ರಾಜೇಶ ಮೇದಾರ ಅವರು 30 ಅಡಿ ಅಗಲ –90 ಅಡಿ ಎತ್ತರದ ಬಿದಿರಿನ ಐಫೆಲ್‌ ಗೋಪುರ ಮಾದರಿ ನಿರ್ಮಿಸಿದ್ದಾರೆ. 50 ದಿನಗಳ ಕಾಲ ಮೇದಾರ ಸಮಾಜದ 50 -60 ಕ್ಕೂ ಹೆಚ್ಚು ಯುವಕರು ಒಗ್ಗಟ್ಟಿನಿಂದ ಹಗಲು ರಾತ್ರಿಯೆನ್ನದೇ ಇದಕ್ಕಾಗಿ ಶ್ರಮಿಸಿದ್ದಾರೆ.ಪ್ರತಿ ವರ್ಷ ಐದು ದಿನಗಳ ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡಲಾಗುತ್ತಿತ್ತು. ಈ ವರ್ಷ 9 ದಿನಗಳವರೆಗೆ ಸಾರ್ವಜನಿಕರಿಗೆ ಉಚಿತವಾಗಿ ದರ್ಶನಕ್ಕಿಡಲಾಗಿದೆ. ಝಗಮಗಿಸುವ ವಿದ್ಯುತ್‌ ಅಲಂಕಾರ ಮಾಡಲಾಗಿದೆ.

ಸೆ. 25 ರಂದು ಅನ್ನಸಂತರ್ಪಣೆ, ಸೆ. 26 ರಂದು ಸಂಜೆ 4ರಿಂದ ವಿಘ್ನೇಶ್ವರ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಮೇದಾರ ಸಂಘದ ಅಧ್ಯಕ್ಷ ಕೃಷ್ಣ ಮೇದಾರ ತಿಳಿಸಿದ್ದಾರೆ. ಶ್ರೀಕಾಂತ ಮೇದಾರ ಮತ್ತು ರಾಘವೇಂದ್ರ ಮೇದಾರ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.