ADVERTISEMENT

ಹಾವೇರಿ ಜಿಲ್ಲೆಯ ಅಕ್ಕಿಆಲೂರಿನ ಅಳಿಯನಿಗೆ ಸಿಎಂ ಪಟ್ಟ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 15:37 IST
Last Updated 27 ಜುಲೈ 2021, 15:37 IST
ಬಸವರಾಜ ಬೊಮ್ಮಾಯಿ ಅವರ ಮದುವೆ ಆರತಕ್ಷತೆಗೆ ವರನಟ ಡಾ.ರಾಜಕುಮಾರ್‌ ಬಂದು ಶುಭ ಹಾರೈಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಇದ್ದಾರೆ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ ಅವರ ಮದುವೆ ಆರತಕ್ಷತೆಗೆ ವರನಟ ಡಾ.ರಾಜಕುಮಾರ್‌ ಬಂದು ಶುಭ ಹಾರೈಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಇದ್ದಾರೆ (ಸಂಗ್ರಹ ಚಿತ್ರ)   

ಅಕ್ಕಿಆಲೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದು, ಅವರ ಬೀಗರ ಊರು ಅಕ್ಕಿಆಲೂರಿನಲ್ಲಿ ಹರ್ಷ ಮನೆ ಮಾಡಿದೆ. ಊರಿನ ಅಳಿಯ ನಾಡದೊರೆಯಾಗಿ ಆಯ್ಕೆಯಾಗಿರುವುದಕ್ಕೆ ಸ್ಥಳೀಯರು ಸಂಭ್ರಮಿಸುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ಧರ್ಮಪತ್ನಿ ಚನ್ನಮ್ಮ ಬೊಮ್ಮಾಯಿ ಅವರ ತವರು ಮನೆ ಅಕ್ಕಿಆಲೂರು. ಇಲ್ಲಿನ ಪಾಟೀಲ ಮನೆತನಕ್ಕೆ ಸೇರಿದ ಚನ್ನಮ್ಮ ಅವರು ಬಸವರಾಜ ಬೊಮ್ಮಾಯಿ ಅವರನ್ನು ಕೈಹಿಡಿದಿದ್ದಾರೆ.

ಮೊದಲಿನಿಂದಲೂ ಬಸವರಾಜ ಬೊಮ್ಮಾಯಿ ಅವರಿಗೆ ಅಕ್ಕಿಆಲೂರಿನ ಬಗೆಗೆ ವಿಶೇಷ ಪ್ರೀತಿ, ಮಮಕಾರ. ಇತ್ತ ಬಂದರೆ ಸಾಕು ತಮ್ಮ ಬೀಗರ ಮತ್ತು ಒಡನಾಡಿಗಳ ಮನೆಗೆ ಬಾರದೇ ಹೋಗುವುದಿಲ್ಲ. ಬೆಂಗಳೂರು, ನವದೆಹಲಿ ಅಥವಾ ಮತ್ತೆಲ್ಲಾದರೂ ಸ್ಥಳೀಯರು ಕಾಣಸಿಕ್ಕರೆ ಕೂಡಲೇ ಅವರನ್ನು ಕರೆದು ಮಾತನಾಡಿಸಿ ವಿಶೇಷ ಕಾಳಜಿ ತೋರುವ ಜತೆಗೆ ಕೆಲಸವನ್ನೂ ಮಾಡಿ ಕೊಡುತ್ತಾರೆ ಎಂಬುದು ಅವರ ಅಭಿಮಾನಿಗಳ ಅನಿಸಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.