ADVERTISEMENT

ತಾಳಿ ಕಟ್ಟಿಸಿಕೊಂಡ್ಮೇಲೆ ನಾವು ಬಿಜೆಪಿಯವ್ರೆ: ಬಿ.ಸಿ.ಪಾಟೀಲ

ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 13:44 IST
Last Updated 30 ನವೆಂಬರ್ 2020, 13:44 IST
ಬಿ.ಸಿ.ಪಾಟೀಲ, ಕೃಷಿ ಸಚಿವ 
ಬಿ.ಸಿ.ಪಾಟೀಲ, ಕೃಷಿ ಸಚಿವ    

ಹಾವೇರಿ: ‘ನಾವು ಬಿಜೆಪಿ ಸೇರಿ, ಚುನಾವಣೆಯಲ್ಲಿ ಅಧಿಕೃತವಾಗಿ ಗೆದ್ದು ಬಂದಿದ್ದೇವೆ. ಹೀಗಾಗಿ ಒಂದು ಬಾರಿ ತಾಳಿ ಕಟ್ಟಿಸಿಕೊಂಡ ಮೇಲೆ ನಾವು ಆ ಪಕ್ಷದ ಸದಸ್ಯರೇ ಆಗುತ್ತೇವೆ.ಮೂಲ ಮತ್ತು ವಲಸಿಗ ಎಂಬುದು ಕಾಂಗ್ರೆಸ್‌ನವರ ಸೃಷ್ಟಿ. ಹೀಗಾಗಿ ನಮ್ಮಲ್ಲಿ ಯಾವುದೇ ಒಡಕಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾವೆಲ್ಲರೂ ಊಟಕ್ಕೆ ಒಂದೆಡೆ ಸೇರಿದ್ದೆವು.ಸಚಿವ ಸ್ಥಾನ ತೊರೆದು ಬಂದವರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸುವ ಬಗ್ಗೆ ಚರ್ಚೆ ಮಾಡಿದೆವು.ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಯನ್ನೂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸುತ್ತೇವೆ’ ಎಂದರು.

ಆರೋಪಿಗಳ ಶೀಘ್ರ ಬಂಧನ:

ADVERTISEMENT

ಮಂಗಳೂರಿನಲ್ಲಿ ಗೋಡೆ ಬರಹ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರೊಂದಿಗೆ ಬಸವರಾಜ ಬೊಮ್ಮಾಯಿ ಮಾತನಾಡಿ,
‘ಕೋಮುಸೌಹಾರ್ದ ಕದಡುವ ಬರಹಗಳನ್ನು ಬರೆಯುವವರ ಬಗ್ಗೆ ತನಿಖೆ ಮಾಡಲು ಡಿಜಿ, ಐಜಿಗೆ ಹೇಳಿದ್ದೇನೆ. ರಾತ್ರಿ ಗಸ್ತು ಹೆಚ್ಚಿಸಲು ಸೂಚಿಸಿದ್ದೇನೆ. ಈಗಾಗಲೇ ಕೆಲವೊಂದು ಸುಳಿವು ಸಿಕ್ಕಿವೆ. ಕೃತ್ಯ ಎಸಗಿದವರನ್ನು ಶೀಘ್ರ ಬಂಧಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.