ತಡಸ (ಅರಟಾಳ) : ಹಾನಗಲ್ ಕಡೆಯಿಂದ ಹುಬ್ಬಳಿಗೆ ಹೊರಟಿದ್ದ ಲಾರಿಗೆ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಹೊಸೂರು ಯತ್ತಿನಹಳ್ಳಿ ಬಳಿ ನಡೆದಿದೆ.
ಅರಟಾಳ ಗ್ರಾಮದ ವಿನಯ ಡಿಕ್ಕಪ್ಪ ಲಮಾಣಿ (22) ಮೃತ ದುರ್ದೈವಿ ಆಗಿದ್ದು, ಪ್ರಶಾಂತ ವಾಚಪ್ಪ ಲಮಾಣಿ (13), ಚೇತನ ಈರಪ್ಪ ಲಮಾಣಿ (17) ಇಬ್ಬರು ಗಾಯಗೊಂಡು ಚಿಕಿತ್ಸೆಗೆ ಶಿಗ್ಗಾವಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ವಿರುದ್ಧ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.