ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಬಿಜೆಪಿ ಬದ್ಧ: ಶಾಸಕ ರಾಮಣ್ಣ ಲಮಾಣಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:41 IST
Last Updated 18 ಅಕ್ಟೋಬರ್ 2021, 14:41 IST
ಹಾನಗಲ್ ತಾಲ್ಲೂಕಿನ ಗುಂಡೂರ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಸನ್ಮಾನಿಸಲಾಯಿತು
ಹಾನಗಲ್ ತಾಲ್ಲೂಕಿನ ಗುಂಡೂರ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಸನ್ಮಾನಿಸಲಾಯಿತು   

ಹಾನಗಲ್: ‘ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಬಂಜಾರ ಸಮಾಜಕ್ಕೆ ಬಿಎಸ್‌ವೈ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಬಂದಿವೆ’ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಬಂಜಾರ ಸಮಾಜದ ಜನರು ಹೆಚ್ಚು ವಾಸಿಸುವ ತಾಲ್ಲೂಕಿನ ಕರಗುದರಿ, ರತ್ನಾಪೂರ, ಗುಂಡೂರ, ಬಾದಾಮಗಟ್ಟಿ, ನೆಲ್ಲಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.

ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ, ‘ಹಾನಗಲ್ ಕ್ಷೇತ್ರದ ಸಾಕಷ್ಟು ತಾಂಡಾಗಳನ್ನು ಸಿ.ಎಂ. ಉದಾಸಿ ಅಭಿವೃದ್ಧಿಪಡಿಸಿದ್ದಾರೆ’ ಎಂದರು.

ADVERTISEMENT

ಸಂಸದ ಶಿವಕುಮಾರ ಉದಾಸಿ ಲಂಬಾಣಿ ಭಾಷೆಯಲ್ಲಿ ಭಾಷಣ ಆರಂಭಿಸಿದರು. ‘ಈ ಚುನಾವಣೆಯಲ್ಲಿ
ಹಾನಗಲ್ ಕ್ಷೇತ್ರವನ್ನು ಬಿಜೆಪಿ ಮಡಿಲಿಗೆ ಹಾಕುವ ಜವಾಬ್ದಾರಿ ತಾಲ್ಲೂಕಿನ ಮತದಾರರ ಮೇಲಿದೆ’ ಎಂದರು.

ಅಭ್ಯರ್ಥಿ ಶಿವರಾಜ ಸಜ್ಜನ ಮಾತನಾಡಿದರು. ಲಂಬಾಣಿ ಸಮಾಜದ ತಿಪ್ಪೇಸ್ವಾಮಿ ಶ್ರೀ, ಮುಖಂಡರಾದ ಪದ್ಮನಾಭ ಕುಂದಾಪೂರ, ಪ್ರಶಾಂತ ಪೂಜಾರ, ಮಾಲತೇಶ ಜಾಧವ, ಕೊಟ್ರಪ್ಪ ನಾಯಕ, ರವಿ ಪೂಜಾರ, ಮಹೇಶ ನಾಯಕ, ಕುನ್ನಪ್ಪ ದೊಡ್ಡಮನಿ, ಫಕ್ಕೀರಪ್ಪ ನಾಯಕ, ರವಿ ಕಾರಬಾರಿ, ಚಂದ್ರಪ್ಪ ಹರಿಜನ, ಶಿವಪ್ಪ ದೊಡ್ಡಮನಿ, ಜಾನಪ್ಪ ಕಡೆಮನಿ, ದಾವಲೆಪ್ಪ ಹುಣಸಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.