ಹಾನಗಲ್: ತಾಲ್ಲೂಕಿನ ನಿಟಗಿನಕೊಪ್ಪ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಕೊಳವೆಬಾವಿಗೆ ಅಳವಡಿಸಿದ್ದ ಮೊಟಾರ್ ಸ್ಟಾರ್ಟರ್, ಕೇಬಲ್ ಮತ್ತು ಸೋಲಾರ್ ಪ್ಲೇಟ್‌ಗಳ ಕಳವಾಗಿದೆ.
ಬುಧವಾರ ರಾತ್ರಿ ಚಂದ್ರಪ್ಪ ವಿರಾಪೂರ ಎಂಬ ರೈತರಿಗೆ ಸೇರಿದ ಹೊಲದಲ್ಲಿನ ಕೊಳವೆಬಾವಿಯ ಸ್ಟಾರ್ಟರ್ ಮತ್ತು ಅದರ ಕೇಬಲ್ ಕಳವು ಮಾಡಲಾಗಿದೆ. ಈ ಜಮೀನು ಸಮೀಪದ ಉಮೇಶ ದೊಡ್ಡಮನಿ ಅವರ ಹೊಲದಲ್ಲಿ ಎರಡು ದಿನಗಳ ಹಿಂದೆ ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕ್ಕಾಗಿ ಹಾಕಲಾಗಿದ್ದ ಸೋಲಾರ್ ಪ್ಲೆಟ್‌ಗಳ ಕಳವಾಗಿವೆ.
ನಿಟಗಿನಕೊಪ್ಪ ಸಮೀಪದ ಕರಗುದರಿ ಗ್ರಾಮದ ಮಕ್ಬೂಲ್ ಆಡೂರ ಎಂಬುವವರ ಕೃಷಿ ಸಂಬಂಧಿತ ಸಾಮಗ್ರಿಗಳು ಈ ಹಿಂದೆ ಕಳುವಾಗಿವೆ. ಈ ರೀತಿಯ ಕೃತ್ಯಗಳನ್ನು ಪೊಲೀಸ್ ಇಲಾಖೆ ತಡೆದು ರೈತರ ಸಂಕಷ್ಟಗಳಿಗೆ ಪರಿಹಾರ ಕೊಡಬೇಕು ಎಂದು ರೈತ ಉಮೇಶ ದೊಡ್ಡಮನಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.