ADVERTISEMENT

ಬಿಜೆಪಿ–ಕಾಂಗ್ರೆಸ್‌ನಿಂದ ಬೇಸತ್ತ ಜನತೆ

ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಅಯೂಬ್‌ಖಾನ್ ಪಠಾಣ್‌ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:39 IST
Last Updated 11 ಏಪ್ರಿಲ್ 2019, 16:39 IST
ಬಿಎಸ್ಪಿ ಅಭ್ಯರ್ಥಿ ಅಯೂಬ್‌ಖಾನ್ ಪಠಾಣ
ಬಿಎಸ್ಪಿ ಅಭ್ಯರ್ಥಿ ಅಯೂಬ್‌ಖಾನ್ ಪಠಾಣ   

ಹಾವೇರಿ:ಬಿಜೆಪಿ–ಕಾಂಗ್ರೆಸ್‌ನ ರಾಜಕೀಯದಿಂದ ಬೇಸತ್ತ ಮತದಾರರು ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ)ಯತ್ತ ಚಿತ್ತ ಹರಿಸುತ್ತಿದ್ದಾರೆ ಎಂದು ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಯೂಬ್‌ಖಾನ್ ಪಠಾಣ ಹೇಳಿದರು.

ಮತಯಂತ್ರದಲ್ಲಿ (ಇವಿಎಂ) ಮೊದಲ ಕ್ರಮ ಸಂಖ್ಯೆಯಿದ್ದು, ‘ಆನೆ’ ಚಿಹ್ನೆ ಇದೆ. ಪ್ರಮುಖ ಪಕ್ಷವಾದ ಕಾರಣ ನಮಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರದಲ್ಲಿ ಪ್ರವಾಸವನ್ನು ಆರಂಭಿಸಿದ್ದೇವೆ. ಏ.19ರಂದು ಶಾಸಕ ಮಹೇಶ್ ಹಾಗೂ ರಾಜ್ಯ ಮುಖಂಡರು ಹಾವೇರಿಗೆ ಬರಲಿದ್ದಾರೆ. ಕೇವಲ ದೊಡ್ಡ ದೊಡ್ಡ ರ್‍ಯಾಲಿಗಳನ್ನು ನಡೆಸುವುದರಿಂದ ಜನರ ಮನವೊಲಿಸಲು ಸಾಧ್ಯವಿಲ್ಲ. ಅದಕ್ಕಾಗಿ, ಪ್ರಮುಖರು ಹಾಗೂ ಮತದಾರರನ್ನು ನೇರವಾಗಿ ಸಂಪರ್ಕಿಸುತ್ತಿದ್ದೇವೆ ಎಂದರು.

ADVERTISEMENT

ಸಂವಿಧಾನ ಬದ್ಧ ಆಡಳಿತ ಹಾಗೂ ಮಾಯಾವತಿಯವರನ್ನು ಪ್ರಧಾನಿ ಮಾಡಬೇಕು ಎಂಬುದು ನಮ್ಮ ಕನಸು. ಶೋಷಿತ ಸಮಾಜದ ಮಹಿಳೆಯೊಬ್ಬಳು ಉನ್ನತ ಹುದ್ದೆ ಅಲಂಕರಿಸುವುದನ್ನು ನೋಡಲು ಮಹಿಳೆಯರು ಹಾಗೂ ಶೋಷಿತ ವರ್ಗದವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಆರ್. ಮರೆಣ್ಣವರ ಮಾತನಾಡಿ, ಭೂ ರಹಿತರಿಗೆ ಎರಡು ಎಕರೆ ಭೂಮಿ, ಎಲ್ಲರಿಗೂ ಉದ್ಯೋಗ, ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದೇ ನಮ್ಮ ಪ್ರಣಾಳಿಕೆ. ರಾಜ್ಯದ ಎಲ್ಲ ಕ್ಷೇತ್ರದಲ್ಲೂ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ ಎಂದರು.

ಎಂ.ಕೆ. ಮಕ್ಬೂಲ್, ಶಿವಕುಮಾರ ತಳವಾರ, ಅಬ್ದುಲ್‌ ಖಾದರ್ ಧಾರವಾಡಕರ್, ಶಂಭುಲಿಂಗಯ್ಯ ಹನಗೋಡಿಮಠ, ವಿಜಯಕುಮಾರ್, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.