ADVERTISEMENT

ಬ್ಯಾಡಗಿ: ಹಸುವಿನ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:21 IST
Last Updated 1 ಆಗಸ್ಟ್ 2024, 16:21 IST
<div class="paragraphs"><p>ಚಿರತೆ</p></div>

ಚಿರತೆ

   

ಬ್ಯಾಡಗಿ: ತಾಲ್ಲೂಕಿನ ಆಣೂರು ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹಸುವಿನ ಮೇಲೆ ಗುರುವಾರ ಚಿರತೆ ದಾಳಿ ಮಾಡಿರುವುದಾಗಿ ಗೊತ್ತಾಗಿದೆ. ತೀವ್ರ ಗಾಯಗೊಂಡಿದ್ದ ಹಸು ಸ್ಥಳದಲ್ಲಿಯೇ ಮೃತಪಟ್ಟಿದೆ.

ಚಿರತೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ರೈತರು ಹೊಲಗಳಿಗೆ ತೆರಳಲು ಭಯಪಡುತ್ತಿದ್ದಾರೆ.

ADVERTISEMENT

ಚಂದ್ರಪ್ಪ ಗಾಣಗೇರ ಅವರಿಗೆ ಸೇರಿದ್ದ ಹಸು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ದನಗಾಯಿಗಳು ಎಂದಿನಂತೆ ಹಸುಗಳನ್ನು ಮೇಯಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.