
ಪ್ರಜಾವಾಣಿ ವಾರ್ತೆ
ಬ್ಯಾಡಗಿ: ಕರ್ನಾಟಕ ತಿರುಪತಿ ಎಂದೇ ಪ್ರಸಿದ್ಧವಾದ ತಾಲ್ಲೂಕಿನ ಸುಕ್ಷೇತ್ರ ಕದರಮಂಡಲಗಿ ಗ್ರಾಮದಲ್ಲಿ ಸೋಮವಾರ ಆಂಜನೇಯ (ಕಾಂತೇಶ) ಸ್ವಾಮಿ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಕಾಂತೇಶ ಸ್ವಾಮಿಗೆ ಅಭಿಷೇಕ, ಉತ್ಸವ ಮೂರ್ತಿ ಮೆರವಣೆಗೆ ಹಾಗೂ ಮಹಾ ರಥೋತ್ಸವ ನೆರವೇರಿಸಲಾಯಿತು. ದೇವಸ್ಥಾನ ಮಹಾದ್ವಾರದಿಂದ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ರಥೋತ್ಸವ ತಿರುಪತಿ ತಿಮ್ಮಪ್ಪನ ದೇವಸ್ಥಾನದವರೆಗೆ ಸಾಗಿತು. ಭಕ್ತರು ಜಯಘೋಷಗಳೊಂದಿಗೆ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.