ADVERTISEMENT

ಬ್ಯಾಡಗಿ | ಈಶ್ವರ ದೇವರ ಜಾತ್ರೆ: ಅದ್ದೂರಿ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:51 IST
Last Updated 17 ಫೆಬ್ರುವರಿ 2026, 6:51 IST
ಬ್ಯಾಡಗಿ ತಾಲ್ಲೂಕಿನ ಕೊಲ್ಲಾಪುರ ಗ್ರಾಮದ ಈಶ್ವರ ದೇವರ ಮಹಾರಥೋತ್ಸವದಲ್ಲಿ ಪುರವಂತರು ಒಡಪುಗಳನ್ನು ಪ್ರಸ್ತುತಪಡಿಸಿದರು 
ಬ್ಯಾಡಗಿ ತಾಲ್ಲೂಕಿನ ಕೊಲ್ಲಾಪುರ ಗ್ರಾಮದ ಈಶ್ವರ ದೇವರ ಮಹಾರಥೋತ್ಸವದಲ್ಲಿ ಪುರವಂತರು ಒಡಪುಗಳನ್ನು ಪ್ರಸ್ತುತಪಡಿಸಿದರು    

ಬ್ಯಾಡಗಿ: ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಈಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಹಾರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಬೆಳಿಗ್ಗೆ ವಿಶೇಷ ಪೂಜೆಯ ಬಳಿಕ ಈಶ್ವರ ಮೂರ್ತಿ ರಥದಲ್ಲಿ ಪ್ರತಿಷ್ಠಾಪಿಸಿ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಭಕ್ತರು ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವದ ವೇಳೆ ಪುರವಂತರು ಒಡಪುಗಳನ್ನು ಪ್ರಸ್ತುತಪಡಿಸಿದರು. ಮಧ್ಯಾಹ್ನ ಅಂಗ್ನಿಕುಂಡದ ಮೂಲಕ ಭಕ್ತರು ಸಾಗಿದರು. ಬಳಿಕ ಅನ್ನ ಸಂತರ್ಪನೆ ನೆರವೇರಿಸಲಾಯಿತು. ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ಹೂವಿನ ರಥೋತ್ಸವ ನೆರವೇರಿಸಲಾಯಿತು. ಈಶ್ವರ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.