ADVERTISEMENT

ಹಾವೇರಿ: ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:11 IST
Last Updated 3 ಆಗಸ್ಟ್ 2020, 16:11 IST
ಶಿಗ್ಗಾವಿ ತಾಲ್ಲೂಕಿನ ಅಂದಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣದಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಶಿಗ್ಗಾವಿ ತಾಲ್ಲೂಕಿನ ಅಂದಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣದಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಅಂದಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣದಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಮುದ್ದಿನಕೊಪ್ಪ ಗ್ರಾಮದ ವೈಗುಡ್ಡಿ ಹದ್ದಿನಲ್ಲಿರುವ ಹಳೆಯ ಊರು 47 ಎಕರೆ, ಅಂದಲಗಿ ಗ್ರಾಮದ ಎಡಹಳ್ಳಿ ಹಳೆಯ ಊರು 24 ಎಕರೆ, ಶಡಗರವಳ್ಳಿ ಗ್ರಾಮದ ಗಲಗಿನಕಟ್ಟಿ ಹಳೆ ಊರಿನ 40 ಎಕರೆ ಜಮೀನು ಅಂದಲಗಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದೆ. ಸದರಿ ಆಸ್ತಿಯನ್ನು ಹಲವಾರು ವರ್ಷಗಳಿಂದ ಪ್ರಭಾವಿ ಮುಖಂಡರು ಅತಿಕ್ರಮಣ ಮಾಡಿಕೊಂಡು ಬಂದಿರುತ್ತಾರೆ. ಕೂಡಲೇ ಸದರಿ ಜಮೀನನ್ನು ಹದ್ದುಬಸ್ತು ಮಾಡಿ ತೆರವುಗೊಳಿಸಬೇಕು ಎಂದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಂತೋಷಿ ಮಾತಾ ಬಡಿಗೇರ ಮಾತನಾಡಿ, ನೂರಾರು ಎಕರೆ ಗೋಮಾಳ, ಹುಲ್ಲುಗಾವಲು ಇರುವ ಸರ್ಕಾರಿ ಆಸ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಸಾರ್ವಜನಿಕರ ವಸತಿ ಹಾಗೂ ಸರ್ಕಾರಿ ವಸತಿಯುತ ಶಾಲಾ ಕಾಲೇಜುಗಳಿಗೆ ಯೋಗ್ಯವಾಗಿರುತ್ತದೆ. ಆದ ಕಾರಣ ಕೂಡಲೇ ಅತಿಕ್ರಮಣದಾರರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಕರವೇ ಮುಖಂಡರಾದವಿಶ್ವನಾಥ ಹಿರೇಮಠ, ನಾಗರಾಜ ಮಲ್ಲಮ್ಮನವರ, ಬಸವರಾಜ ವಾಲಿಕಾರ, ಪುಟ್ಟಪ್ಪ ಹಿತ್ತಲಮನಿ, ಗುರುರಾಜ ಡಮ್ಮಣ್ಣನವರ, ಡಾ.ಎಸ್.ವಿ. ಹಿರೇಮಠ, ನಾಗರಾಜ ವಾಲಿಕಾರ, ಬಾಹುಬಲಿ ಜೈನ್, ಎನ್.ಎಫ್. ಹರಿಜನ, ಮಮತಾ ಕೂಡಲ, ರೇಣುಕಾ ಸರಾವರಿ, ಕೃಷ್ಣಪ್ಪ ನಾಗಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.