ADVERTISEMENT

ಹಾವೇರಿ: 77,677 ಮಕ್ಕಳಿಗೆ ಲಸಿಕೆಯ ಗುರಿ

15ರಿಂದ 18 ವರ್ಷದ ಫಲಾನುಭವಿಗಳಿಗೆ ಕೋವಿಡ್ ಲಸಿಕಾಕರಣಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 14:45 IST
Last Updated 2 ಜನವರಿ 2022, 14:45 IST
ಕೋವಿಡ್‌ ಲಸಿಕಾಕರಣದ ದೃಶ್ಯ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕಾಕರಣದ ದೃಶ್ಯ (ಸಾಂದರ್ಭಿಕ ಚಿತ್ರ)   

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ 15ರಿಂದ 18 ವರ್ಷದ ಅರ್ಹ ಫಲಾನುಭವಿಗಳಿಗೆ ಕೋವಿಡ್-19 ಲಸಿಕಾಕರಣವನ್ನು ಜಿಲ್ಲೆಯಾದ್ಯಂತ ಜ.3ರಿಂದ ಹಮ್ಮಿಕೊಳ್ಳಲಾಗಿದೆ.

ಪ್ರತಿ ದಿನ ಆಯ್ದ ಪ್ರೌಢಶಾಲೆ ಮತ್ತು ಪಿ.ಯು ಕಾಲೇಜುಗಳಲ್ಲಿ ನಿಗದಿತ ವೇಳಾಪಟ್ಟಿಯನ್ವಯ ಲಸಿಕಾಕರಣ ಜರುಗಲಿದೆ. ಸಾರ್ವಜನಿಕರು ಈ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೆಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

3ನೇ ಕೊರೊನಾ ಅಲೆಯನ್ನು ತಡೆಗಟ್ಟುವಲ್ಲಿ ಕೋವಿಡ್-19 ಲಸಿಕೆಯು ಪ್ರಮುಖವಾದ ಪಾತ್ರವನ್ನು ವಹಿಸಲಿರುವುದರಿಂದ 15 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಫಲಾನುಭವಿಗಳು, 1ನೇ ಡೋಸ್ ಪಡೆಯದೇ ಇರುವವರು ಆಧಾರ್ ಕಾರ್ಡ್, ಶಾಲಾ ಗುರುತಿನ ಚೀಟಿಯನ್ನು ಇದರಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿ ತಮ್ಮ ತಮ್ಮ ತಾಲ್ಲೂಕಿನ ನಿಗದಿತ ಆಯ್ದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ಕೋರಲಾಗಿದೆ.

ADVERTISEMENT

ಹಾವೇರಿ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 9ನೇ ತರಗತಿಯ 24,054, 10ನೇ ತರಗತಿಯ 25,016 ಹಾಗೂ ಪಿಯು.ಸಿ.ಯ 28,607 ಸೇರಿ ಒಟ್ಟು 77,677 ಮಕ್ಕಳನ್ನು ಗುರುತಿಸಲಾಗಿದೆ.

15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿ

ತಾಲ್ಲೂಕು;9ನೇ ತರಗತಿ;10ನೇ ತರಗತಿ;ಪಿಯುಸಿ

ಬ್ಯಾಡಗಿ;2,150;2,265;2387

ಹಾನಗಲ್‌;3,787;4,018;4,307

ಹಾವೇರಿ;4,463;4,368;7,001

ಹಿರೇಕೆರೂರು;2,958;3,420;4,464

ರಾಣೆಬೆನ್ನೂರು;5,321;5,339;6,083

ಸವಣೂರು;2,413;2,396;1,486

ಶಿಗ್ಗಾವಿ;2,962;3,210;2,879

ಒಟ್ಟು;24,054;25,016;28,607

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.