ADVERTISEMENT

ಹಾವೇರಿ | ವೈದ್ಯ ಸೇರಿ 119 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 3668ಕ್ಕೆ ಏರಿಕೆಯಾದ ಪ್ರಕರಣಗಳು: 82 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 14:09 IST
Last Updated 25 ಆಗಸ್ಟ್ 2020, 14:09 IST
   

ಹಾವೇರಿ: ವೈದ್ಯ, ಶುಶ್ರೂಷಕರು, ಲ್ಯಾಬ್‍ ಟೆಕ್ನಿಷಿಯನ್, ಆಶಾ ಕಾರ್ಯಕರ್ತೆ, ಕೆ.ಎಸ್.ಆರ್.ಟಿ.ಸಿ. ಬಸ್‌ ಚಾಲಕ, ಪೊಲೀಸ್, ರೈಲ್ವೆ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 119 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 82 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 3668 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 2259 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಇಂದಿನ ಐದು ಮರಣ ಪ್ರಕರಣ ಸೇರಿ ಒಟ್ಟಾರೆ 85 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 1,324 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕುವಾರು ವಿವರ

ADVERTISEMENT

ಸವಣೂರು, ಶಿಗ್ಗಾವಿ ಹಾಗೂ ಬ್ಯಾಡಗಿ ತಾಲ್ಲೂಕುಗಳಲ್ಲಿ ತಲಾ-8, ಹಿರೇಕೆರೂರು-13, ಹಾನಗಲ್-16, ಹಾವೇರಿ-19, ರಾಣೆಬೆನ್ನೂರು-46 ಹಾಗೂ ಇತರೆ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮಂಗಳವಾರ ಸೋಂಕಿನಿಂದ ಗುಣಮುಖರಾಗಿ ಸವಣೂರು-2, ಶಿಗ್ಗಾಂವಿ-12, ರಾಣೇಬೆನ್ನೂರು-2, ಹಾವೇರಿ-27, ಬ್ಯಾಡಗಿ-27 ಹಾಗೂ ಹಾನಗಲ್ ತಾಲ್ಲೂಕಿನ 12 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ

ರಾಣೆಬೆನ್ನೂರು ತಾಲ್ಲೂಕು ಗುಡ್ಡದಆನ್ವೇರಿಯ 64 ವರ್ಷದ ಪುರುಷ (ಪಿ-175210), ಹಾನಗಲ್ ನಗರದ 84 ವರ್ಷದ ಪುರುಷ (ಪಿ-258424), ರಟ್ಟೀಹಳ್ಳಿಯ 59 ವರ್ಷದ ಮಹಿಳೆ (ಪಿ-283686) ಹಾವೇರಿ ತಾಲ್ಲೂಕು ಕನವಳ್ಳಿ ಗ್ರಾಮದ 60 ವರ್ಷದ ಮಹಿಳೆ (ಪಿ-251014) ಹಾಗೂ ರಾಣೆಬೆನ್ನೂರು ನಗರದ 50 ವರ್ಷದ ಪುರುಷ (ಪಿ-294691) ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ರ‍್ಯಾಪಿಡ್‌ ಆಂಟಿಜೆನ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿತ್ತು. ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.