ADVERTISEMENT

ಹಾವೇರಿ: ಪ್ರಾಂಶುಪಾಲ ಸೇರಿ 137 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 2772ಕ್ಕೆ ಏರಿಕೆಯಾದ ಪ್ರಕರಣ: 29 ಮಂದಿ ಗುಣಮುಖ, ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 15:44 IST
Last Updated 19 ಆಗಸ್ಟ್ 2020, 15:44 IST
ಕೋವಿಡ್‌ ಕಂಡು ಬಂದ ಹಿನ್ನೆಲೆಯಲ್ಲಿ ರಟ್ಟೀಹಳ್ಳಿ ತಾಲ್ಲೂಕು ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ನಿಗದಿತ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು 
ಕೋವಿಡ್‌ ಕಂಡು ಬಂದ ಹಿನ್ನೆಲೆಯಲ್ಲಿ ರಟ್ಟೀಹಳ್ಳಿ ತಾಲ್ಲೂಕು ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ನಿಗದಿತ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು    

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 137 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 29 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2772 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 1744 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಹಾಗೂ ಬುಧವಾರದ ಮೂರು ಮರಣ ಪ್ರಕರಣ ಸೇರಿ ಒಟ್ಟಾರೆ 62 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 966 ಸಕ್ರಿಯ ಪ್ರಕರಣಗಳಿವೆ.

ವೈದ್ಯ, ಲ್ಯಾಬ್‍ ಟೆಕ್ನಿಷಿಯನ್, ಪ್ರಾಂಶುಪಾಲ, ಕೆ.ಇ.ಬಿ., ನ್ಯಾಯಾಂಗ, ಶಿಕ್ಷಣ, ಆರೋಗ್ಯ, ರೈಲ್ವೆ ಇಲಾಖೆ ಸಿಬ್ಬಂದಿ ಸೇರಿದಂತೆ ಕರ್ತವ್ಯನಿರತ 17 ಕೊರೊನಾ ವಾರಿಯರ್ಸ್‌ಗೆ ಸೋಂಕು ತಗುಲಿದೆ.ಹಾವೇರಿ-43, ರಾಣೆಬೆನ್ನೂರು-29, ಹಿರೇಕೆರೂರು-10, ಹಾನಗಲ್-4, ಬ್ಯಾಡಗಿ-13, ಸವಣೂರ-15, ಶಿಗ್ಗಾವಿ-22 ಇತರೆ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಗುಣಮುಖ:

ಶಿಗ್ಗಾವಿ ಹಾಗೂ ರಾಣೆಬೆನ್ನೂರು ತಲಾ 2, ಹಾವೇರಿ-6, ಬ್ಯಾಡಗಿ ಹಾಗೂ ಹಾನಗಲ್ ತಲಾ 1, ಹಿರೇಕೆರೂರ-5 ಹಾಗೂ ಸವಣೂರ ತಾಲ್ಲೂಕಿನ 12 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ:

ಹಾವೇರಿ ತಾಲ್ಲೂಕು ನಾಗೇಂದ್ರನಮಟ್ಟಿಯ 47 ವರ್ಷದ ಪುರುಷ (ಪಿ-241657) ಆ.16ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆ.17ರಂದು ಮೃತಪಟ್ಟಿದ್ದಾರೆ. ಅಶ್ವಿನಿ ನಗರದ 60 ವರ್ಷದ ಪುರುಷ (ಪಿ-230744) ಆ.15ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.18ರಂದು ಮರಣ ಹೊಂದಿದ್ದಾರೆ ಹಾಗೂ ಬ್ಯಾಡಗಿ ತಾಲ್ಲೂಕು ಬೆಟ್ಟದಮಲ್ಲೇಶ್ವರ ನಗರದ 45 ವರ್ಷದ ಪುರುಷ (ಪಿ-142957) ಜುಲೈ 31ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿತ್ತು. ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.