ADVERTISEMENT

ಕೋವಿಡ್‌: ಹಾವೇರಿ ಜಿಲ್ಲೆಯಲ್ಲಿ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:44 IST
Last Updated 10 ಅಕ್ಟೋಬರ್ 2020, 14:44 IST
ಹಾವೇರಿ ಜಿಲ್ಲಾಡಳಿತ ಭವನ (ಸಾಂದರ್ಭಿಕ ಚಿತ್ರ)
ಹಾವೇರಿ ಜಿಲ್ಲಾಡಳಿತ ಭವನ (ಸಾಂದರ್ಭಿಕ ಚಿತ್ರ)   

ಹಾವೇರಿ: ಕೆವಿಜಿ ಬ್ಯಾಂಕ್ ನೌಕರ ಮತ್ತು ಆರೋಗ್ಯ ಇಲಾಖೆ ನೌಕರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 51 ಮಂದಿಗೆ ಕೋವಿಡ್‌ ದೃಢಪಟ್ಟಿದೆ ಹಾಗೂ 125 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:ಬ್ಯಾಡಗಿ–9, ಹಾನಗಲ್‌–1, ಹಾವೇರಿ–7, ಹಿರೇಕೆರೂರು–7, ರಾಣೆಬೆನ್ನೂರು–22, ಸವಣೂರು–3 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 2 ಮಂದಿಗೆ ಕೋವಿಡ್‌ ದೃಢಪಟ್ಟಿದೆ.

ಬ್ಯಾಡಗಿ–11, ಹಾನಗಲ್‌–1, ಹಾವೇರಿ–30, ಹಿರೇಕೆರೂರು–1, ರಾಣೆಬೆನ್ನೂರು–14 ಹಾಗೂ ಶಿಗ್ಗಾವಿ ತಾಲ್ಲೂಕಿನ 68 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ಮರಣದ ವಿವರ:ಹಿರೇಕೆರೂರು ತಾಲ್ಲೂಕಿನ ತಾವರಗಿ ಗ್ರಾಮದ 48 ವರ್ಷದ ಮಹಿಳೆ, ಬಾಳಂಬೀಡ ಗ್ರಾಮದ 75 ವರ್ಷದ ಮಹಿಳೆ, ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ 70 ವರ್ಷದ ಮಹಿಳೆ ಹಾಗೂ ಹಾಲಗಿ ಗ್ರಾಮದ 55 ವರ್ಷದ ಪುರುಷ ಇವರಿಗೆ ಕೋವಿಡ್‌ ದೃಢಪಟ್ಟಿದ್ದು, ಇವರ ಮರಣವನ್ನು ಶನಿವಾರ ದೃಢೀಕರಿಸಲಾಗಿದೆ.

ಕೋವಿಡ್‌ ಅಂಕಿಅಂಶ

ಜಿಲ್ಲೆಯಲ್ಲಿ ಒಟ್ಟು:9674

ಸಕ್ರಿಯ ಪ್ರಕರಣ:945

ಗುಣಮುಖ:8549

ಸಾವು:180

ಈ ದಿನದ ಏರಿಕೆ

ಹೊಸ ಪ್ರಕರಣ:51

ಗುಣಮುಖ:125

ಸಾವು:4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.