
ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.
ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಪೈಲ್ವಾನರು ಭಾಗವಹಿಸಿದ್ದರು.
ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ಗೆಲುವಿಗಾಗಿ ಸೆಣಸಾಡುತ್ತಿದ್ದರೆ, ಸಾವಿರಾರು ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹಾಕುವ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಕೆಲವರು ಹಲಿಗೆ ಬಾರಿಸುವ ಮೂಲಕ ಪೈಲ್ವಾನರನ್ನು ಪ್ರೋತ್ಸಾಹಿಸಿದರು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ್ ಕುಸ್ತಿಗೆ ಚಾಲನೆ ನೀಡಿದರು. ಹಿರಿಯ ಪೈಲ್ವಾನರನ್ನು, ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಹೊನ್ನಪ್ಪ ಕೊಳ್ಳವರ, ಭರ್ಮಪ್ಪ ಕಲಾದಗಿ, ಸುಭಾಸ ಮಜ್ಜಗಿ, ಉಡಚಪ್ಪ ದೊಡ್ಡಉಚಪ್ಪನವರ, ನಾಗಪ್ಪ ತಿಪ್ಪಕ್ಕನವರ, ನಿಂಗಪ್ಪ ಯರೇಶಿಮಿ, ಸಿದ್ಧನಗೌಡ ಪಾಟೀಲ, ಪಾಂಡಪ್ಪ ತಿಪ್ಪಕ್ಕವರ, ಶೇಖಪ್ಪ ಕಲಕೋಟಿ, ರುದ್ರಪ್ಪ ಕಳ್ಳಿಮನಿ, ಪ್ರಕಾಶ ಬಾರ್ಕಿ, ನಿಂಗಪ್ಪ ಮತ್ತೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.