ADVERTISEMENT

ಹಾವೇರಿ | ‘ಪ್ರಜಾಪ್ರಭುತ್ವದ ಮೇಲಿರಲಿ ಅಚಲ ನಂಬಿಕೆ, ವಿಶ್ವಾಸ’: ಡಿ.ಎಂ.ಸಾಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 3:18 IST
Last Updated 17 ಸೆಪ್ಟೆಂಬರ್ 2025, 3:18 IST
ರಟ್ಟೀಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ  ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಿ.ಎಂ.ಸಾಲಿ ಉದ್ಘಾಟಿಸಿದರು. ಪ್ರಾಚಾರ್ಯ ಎ.ಜಿ.ರಾಘವೇಂದ್ರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು
ರಟ್ಟೀಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ  ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಿ.ಎಂ.ಸಾಲಿ ಉದ್ಘಾಟಿಸಿದರು. ಪ್ರಾಚಾರ್ಯ ಎ.ಜಿ.ರಾಘವೇಂದ್ರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು   

ರಟ್ಟೀಹಳ‍್ಳಿ: ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಅಚಲವಾದ ನಂಬಿಕೆ, ವಿಶ‍್ವಾಸ ಇರಿಸಬೇಕು ಎಂದು ಪ್ರಿಯದರ್ಶಿನಿ ಮಹಾವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಸಾಲಿ ಹೇಳಿದರು.

ಅವರು ಸೋಮವಾರ ಕಾಲೇಜು ಸಭಾಭವನದಲ್ಲಿ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಸುವ ವ್ಯವಸ್ಥೆ ಇದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಸ್ವಾತಂತ್ರ್ಯ ಹಾಗೂ ಕರ್ತವ್ಯಗಳಿವೆ. ಎಲ್ಲರೂ ಸಮಾನರಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ವೈ.ವೈ. ಮರಳೀಹಳ್ಳಿ ಮಾತನಾಡಿ, ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣರಾಗಬಲ್ಲರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ರಾಘವೇಂದ್ರ ಎ.ಜಿ. ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್. ಬಿ. ಕೆಂಚಳ್ಳಿ, ಸಿ.ಎಸ್. ಕಮ್ಮಾರ, ವಿ.ಎಸ್. ರೂಳಿ, ಶಾಂತಮ್ಮ ಎಚ್. ಎಂ.ಎಂ. ಪ್ಯಾಟಿ, ಬಿ.ಸಿ. ತಿಮ್ಮೇನಹಳ್ಳಿ, ಸತೀಶ ಮಡಿವಾಳರ, ಉಮೇಶ ಎನ್.ಕೆ. ಎಂ.ಅರ್. ಅಂಚಿ , ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ಎಸ್. ತಾಂದಳೆ, ಯಲ್ಲಪ್ಪ ಸುರಗೀಹಳ್ಳಿ, ಕವಿತಾ ಹಿರೇಗೌಡರ, ಆಸ್ಮಾ ಆಲದಕಟ್ಟಿ, ಪರ್ವಿನಬಾನು ದೊಡ್ಡಮನಿ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.