ADVERTISEMENT

ಪರಿಸರ ಸಮತೋಲನವೇ ಅಭಿವೃದ್ಧಿ: ಕುಮಾರಯ್ಯ ಚಿಕ್ಕಮಠ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 3:29 IST
Last Updated 6 ಜೂನ್ 2021, 3:29 IST
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಟ್ಟೀಹಳ್ಳಿ ತಾಲ್ಲೂಕು ಗುಂಡಗಟ್ಟಿ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲಾಯಿತು. ತಾಲ್ಲೂಕು ಪಂಚಾಯ್ತಿ ಐಇಸಿ ಸಂಯೋಜನಾಧಿಕಾರಿ ಕುಮಾರಯ್ಯ ಚಿಕ್ಕಮಠ, ಹಿರೇಕೆರೂರ ಅರಣ್ಯ ಉಪಶಾಖೆಯ ಅರಣ್ಯಾಧಿಕಾರಿ ವಿ.ಬಿ. ಮೋಹಿತೆ ಮಾತನಾಡಿದರು. ಗ್ರಾಮ ಪಂಚಾಯ್ತಿ ಸಿಬ್ಬಂದಿ ಚಂದ್ರು ಇದ್ದಾರೆ

ರಟ್ಟೀಹಳ್ಳಿ: ಪರಿಸರ ಉಳಿಸಿ ಬೆಳೆಸಿದರೆ ನಾಡಿನ ಅಭಿವೃದ್ಧಿ ಸಾಧ್ಯ ಎಂದು ರಟ್ಟೀಹಳ್ಳಿ ತಾಲ್ಲೂಕು ಪಂಚಾಯ್ತಿ ಐಇಸಿ ಸಂಯೋಜನಾಧಿಕಾರಿ ಕುಮಾರಯ್ಯ ಚಿಕ್ಕಮಠ ಹೇಳಿದರು.

ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುಂಡಗಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಇಂಗಳಗೊಂದಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೈಗಾರೀಕರಣ, ನಗರೀಕರಣವೇ ಅಭಿವೃದ್ಧಿಯಲ್ಲ, ಸಮತೋಲದಿಂದ ಪರಿಸರವನ್ನು ರಕ್ಷಿಸಿ, ಪೋಷಿಸುವುದು ಕೂಡ ಅಭಿವೃದ್ಧಿಯಾಗಿದೆ ಎಂದರು.

ADVERTISEMENT

ಹಿರೇಕೆರೂರ ಅರಣ್ಯ ಉಪಶಾಖೆಯ ಅರಣ್ಯಾಧಿಕಾರಿ ವಿ.ಬಿ. ಮೋಹಿತೆ ಮಾತನಾಡಿದರು. ಗ್ರಾಮ ಪಂಚಾಯ್ತಿ ಸಿಬ್ಬಂದಿ ಚಂದ್ರು, ಗುಂಡಗಟ್ಟಿ ಗ್ರಾಮದ ನರೇಗಾ ಮೇಟ್ ಹಾಗೂ ಕೂಲಿ ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.