ನರಗುಂದ: ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಆರಂಭಗೊಂಡಿದೆ. ಇದಕ್ಕೆ ಹೊಂದಿಕೊಂಡ ವಿನೂತನ ತಂತ್ರಜ್ಞಾನದ ಪದ್ಧತಿಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಎಕ್ಟ್ರಾ ಮಾರ್ಕ್ಸ್ ಡಿಜಿಟಲ್ ಲೈಬ್ರರಿ ಶಿಕ್ಷಣ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಯಲ್ಲಿ ತಿಳಿಯದ ಗೊತ್ತಾಗದ ವಿವಿಧ ವಿಷಯಗಳ ಎಲ್ಲ ಘಟಕಗಳನ್ನು ಮನೆಯಲ್ಲಿಯೇ ನೋಡಲು ಒಳಗೊಂಡ ಬೋಧನಾ ಪದ್ದತಿ ಎಕ್ಟ್ರಾ ಮಾರ್ಕ್ಸ್ ತಂತ್ರಜ್ಞಾನ ಒಳಗೊಂಡಿದೆ. ಶಾಲೆಯ ಜೊತೆಗೆ ಮನೆಯಲ್ಲೂ ದೊರೆಯುವ ಹಾಗೆ ತಂತ್ರಜ್ಞಾನ ಪದ್ಧತಿ ಶಿಕ್ಷಣವನ್ನು ಗದಗ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಲಯನ್ಸ್ ಶಿಕ್ಷಣ ಸಂಸ್ಥೆ ಅಳವಡಿಸಿರುವುದು ವಿಶೇಷ.
ಈ ಮೂಲಕ 10ನೇ ತರಗತಿ ವಿದ್ಯಾರ್ಥಿಗಳು ಮನೆಯಲ್ಲೂ ಎಲ್ಲ ವಿಷಯಗಳನ್ನು ನವನವೀನ ರೀತಿಯಲ್ಲಿ ಕಲಿಯಲು ಸಾಧ್ಯವಾಗುತ್ತಿದೆ. ಇದರಿಂದ ಎಲ್ಲ ವಿಷಯಗಳನ್ನು ಕರಗತ ಮಾಡಿಕೊಂಡು ನಿರೀಕ್ಷೆಗಿಂತಲೂ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗುತ್ತಿದೆ. ಇದು ಬೆಂಗಳೂರಿನಂತಹ ಮಹಾನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳು.ಈ ಪದ್ದತಿ ಜಾರಿ ಮಾಡುತ್ತವೆ.ಅಂತಹ ಪದ್ಧತಿ ನಮ್ಮ ವಿದ್ಯಾರ್ಥಿಗಳಿಗೂ ದೊರೆಯಬೇಕೆಂಬ ಸದುದ್ದೇಶದಿಂದ ಇಲ್ಲೇ ಆರಂಭಿಸಲಾಗಿದೆ.
ಇಮೇಲ್ ಐಡಿ, ಪಾಸ್ ವರ್ಲ್ಡ್ ಮೂಲಕ ಮಾತ್ರ ಇದನ್ನು ಪಡೆಯಬಹುದು.ಆದ್ದರಿಂದ ಇದು ನಿಗದಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ವಿದೆ.ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ.ಗುಡಿಸಾಗರ ಮಾತನಾಡಿ, ಲಯನ್ಸ್ ಕ್ಲಬ್ ಡಿಜಿಟಲ್ ಲೈಬ್ರರಿ ಶಿಕ್ಷಣ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನದ ಶಿಕ್ಷಣ ಪದ್ಧತಿ ಪರಿಚಯಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದರು.
ಕೋ ಅರ್ಡಿನೇಟರ್ ಪ್ರೇರಣಾ ಪಾತ್ರಾ ಹಾಗೂ ಎಕ್ಟ್ರಾ ಮಾರ್ಕ್ಸನ ರೋಹಿತ್.ಎಂ ಡಿಜಿಟಲ್ ತಂತ್ರಜ್ಞಾನ ಬೋಧನಾ ಪದ್ಧತಿ ವಿವರಿಸಿದರು.
ಸಮಾರಂಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಸಿ.ಎಸ್.ಸಾಲೂಟಗಿಮಠ, ಎಸ್.ಎಸ್.ಪಾಟೀಲ, ಜೆ.ವಿ.ಕಂಠಿ, ಆರ್.ವಿ.ಆನೇಗುಂದಿ, ವಿಜಯಕುಮಾರ ಬೇಲೇರಿ, ಕ್ಲಬ್ ಸದಸ್ಯರಾದ ಎ.ವಿ.ಪಾಟೀಲ, ಗೊವೇಶ್ವರ ಇದ್ದರು. ಮುಖ್ಯಶಿಕ್ಷಕ ಜಿ.ಬಿ.ಹಿರೇಮಠ ಸ್ವಾಗತಿಸಿದರು. ವಿ.ವಿ.ನೂರಶೆಟ್ಟರ ನಿರೂಪಿಸಿದರು. ಶಿವಾನಂದ ಮಲ್ಲಾಪುರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.