ಅಕ್ಕಿಆಲೂರು: ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಆಡೂರು ಪೊಲೀಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಯುವ ಉದ್ಯಮಿ ಗೌಸ್ ಕಾಲೇನವರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಿದರು.
ಶಿಗ್ಗಾವಿ ಡಿವೈಎಸ್‍ಪಿ ಗುರುಶಾಂತಪ್ಪ ಕೆ.ವಿ. ಮಾತನಾಡಿ, ‘ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಅಂದಾಗ ಅಪಘಾತಗಳೂ ಕೂಡ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದರೆ ಅಪಾಯ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಅರಿವು ಮೂಡಬೇಕಿದೆ. ಮಾನವ ತಪ್ಪುಗಳಿಂದಲೇ ಅಪಘಾತ ಸಂಭವಿಸುತ್ತಿದ್ದು, ತಪ್ಪು ಮಾಡದೇ ನಿಯಮ ಪಾಲಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ’ ಎಂದರು.
ಹಾನಗಲ್ ಸಿಪಿಐ ಆಂಜನೇಯ ಎಚ್, ಪಿಎಸ್‍ಐ ಶರಣಪ್ಪ ಹಂಡ್ರಗಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಫರಸಾಬ ಮುಲ್ಲಾ, ಮುಖಂಡರಾದ ಚಮನ ಪಠಾಣ, ಮೆಹಬೂಬಅಲಿ ನೆಗಳೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.