ADVERTISEMENT

ಹಾವೇರಿ ಜಿಲ್ಲೆ ನೂತನ ಎಸ್ಪಿಯಾಗಿ ಡಾ.ಶಿವಕುಮಾರ ಗುಣಾರೆ ವರ್ಗ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 15:38 IST
Last Updated 13 ಜನವರಿ 2023, 15:38 IST
ಡಾ.ಶಿವಕುಮಾರ ಗುಣಾರೆ, ಎಸ್ಪಿ
ಡಾ.ಶಿವಕುಮಾರ ಗುಣಾರೆ, ಎಸ್ಪಿ   

ಹಾವೇರಿ: ಐಪಿಎಸ್‌ ಅಧಿಕಾರಿ ಡಾ.ಶಿವಕುಮಾರ ಗುಣಾರೆ ಅವರನ್ನು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಒಂದೂವರೆ ವರ್ಷದಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತರಾಯ ಅವರು ರಾಜ್ಯ ಗುಪ್ತಚರ ಇಲಾಖೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಡಾ.ಶಿವಕುಮಾರ್‌ ಅವರು ದಾವಣಗೆರೆ, ಇಂಡಿ ಹಾಗೂ ಕಲಬುರ್ಗಿ ರೈಲ್ವೆ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹೆಚ್ಚುವರಿ ಎಸ್ಪಿಯಾಗಿ ವಿಜಯಪುರ, ರಾಯಚೂರು ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿಯಾಗಿ ಹುಬ್ಬಳ್ಳಿ–ಧಾರವಾಡದಲ್ಲಿ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ಬಡ್ತಿ ಪಡೆದು, ರಾಜ್ಯ ಗುಪ್ತಚರ ಇಲಾಖೆಯಲ್ಲಿ ಎಸ್ಪಿಯಾಗಿ ಒಂದು ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.