ADVERTISEMENT

ಬಾತುಕೋಳಿಯೇ ದುಡಿಮೆ ಮೂಲ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 16:56 IST
Last Updated 8 ಜುಲೈ 2018, 16:56 IST
ಕುಮಾರಪಟ್ಟಣ ಸಮೀಪದ ನದಿಹರಳಹಳ್ಳಿ ಗ್ರಾಮದ ಹಳ್ಳದಲ್ಲಿ ನಿಂತಿರುವ ನೀರಿನಲ್ಲಿ ಸಾವಿರಾರು ಬಾತುಕೋಳಿಗಳನ್ನು ಮೇಯಿಸುತ್ತಿರುವ ತಮಿಳುನಾಡು ಮೂಲದ ವ್ಯಕ್ತಿ.
ಕುಮಾರಪಟ್ಟಣ ಸಮೀಪದ ನದಿಹರಳಹಳ್ಳಿ ಗ್ರಾಮದ ಹಳ್ಳದಲ್ಲಿ ನಿಂತಿರುವ ನೀರಿನಲ್ಲಿ ಸಾವಿರಾರು ಬಾತುಕೋಳಿಗಳನ್ನು ಮೇಯಿಸುತ್ತಿರುವ ತಮಿಳುನಾಡು ಮೂಲದ ವ್ಯಕ್ತಿ.   

ಕುಮಾರಪಟ್ಟಣ: ಇಲ್ಲಿಗೆ ಸಮೀಪದ ನದಿಹರಳಹಳ್ಳಿ ಬಳಿ ಇರುವ ಹಳ್ಳವೊಂದರಲ್ಲಿ ನಿಂತಿರುವ ನೀರಿನಲ್ಲಿ ತಮಿಳುನಾಡು ಮೂಲದ ಎಂಟತ್ತು ಕುಟುಂಬದವರು ತಮ್ಮ ಸಾವಿರಾರು ಬಾತುಕೋಳಿಗಳನ್ನು ಮೇಯಿಸುತ್ತಿರುವ ದೃಶ್ಯ ಭಾನುವಾರ ಕಂಡು ಬಂದಿತು'.

ತಮಿಳುನಾಡಿನಿಂದ ಕುಟುಂಬ ಸಮೇತರಾಗಿ ಬಂದು ರಾಜ್ಯ ವಿವಿಧ ಭಾಗಗಳಲ್ಲಿ ನೆಲೆಸಿ ಕುರಿ ಹಿಂಡಿನಂತೆ ಸಾಕಿರುವ ಬಾತು ಕೋಳಿಗಳನ್ನು ಹೆಚ್ಚಾಗಿ ನೀರಿರುವ ಹಳ್ಳ-ಕೊಳ್ಳಗಳಲ್ಲಿ ಮೇಯಿಸುತ್ತಾರೆ. ಊರಿನ ಹೊರ ವಲಯದಲ್ಲಿ ತಮ್ಮ ತಾತ್ಕಾಲಿಕ ಗುಡಾರಗಳನ್ನು ಹಾಕಿಕೊಂಡು ಅವರು ಸಾಕಿದ ಬಾತು ಕೋಳಿಗಳನ್ನು ನಂಬಿಕೊಂಡು ದುಡಿಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಅವರು ತಮಿಳುನಾಡು ರಾಜ್ಯದ ವೆಲ್ಲೂರ್ನಿಂದ ಬಂದು ಇದೇ ದುಡಿಮೆ ನಂಬಿ ಊರೂರು ಅಲೆಯುತ್ತ ಜೀವನ ಸಾಗಿಸುತ್ತಿದ್ದೇವೆ. ಇವು ಮಾಲೀಕ ಶ್ರೀನಿವಾಸನ್ ಅವರಿಗೆ ಸೇರಿದ್ದು, 300-ರೂಗಳಿಗೆ ಒಂದರಂತೆ ಮಾರಾಟ ಮಾಡಲಾಗುತ್ತದೆ. ನಮಗೆ ದಿನಕ್ಕೆ 250 ಕೂಲಿ ಕೊಡುತ್ತಾರೆ ಎಂದು ಕೂಲಿ ಕಾಮರ್ಿಕರೊಬ್ಬರ ಅಭಿಪ್ರಾಯ.

ADVERTISEMENT

ವರ್ಷದಲ್ಲೊಮ್ಮೆ ಲಾರಿಗಳಲ್ಲಿ ಹೇರಿಕೊಂಡು ಬಂದ ಬಾತು ಕೋಳಿಗಳನ್ನು ಕೆಲ ರೈತರು ಭತ್ತ ನಾಟಿ ಮಾಡುವ ಮುನ್ನ ಜಮೀನಿನಲ್ಲಿರುವ ಜಿಗಳಿ ಹುಳುಗಳನ್ನು ತಿನ್ನಲು ಬಾತು ಕೋಳಿಗಳಿಗೆ ಅವಕಾಶ ಕಲ್ಪಿಸುತ್ತಾರೆ ಎಂದು ಗ್ರಾಮಸ್ಥ ಶಿವಕುಮಾರ್ ಜಾಧವ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.