
ಹಾನಗಲ್: ಮೊಟ್ಟೆಗಳ ದರ ಏರಿಕೆಯಾಗಿದ್ದು, ಅಂಗನವಾಡಿಗಳ ಮೂಲಕ ಫಲಾನುಭವಿಗಳಿಗೆ ವಿತರಣೆಯಾಗುವ ಹೆಚ್ಚುವರಿ ಮೊತ್ತವನ್ನು ಕಾರ್ಯಕರ್ತೆಯರಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೊಬೈಲಲ್ಲಿ ಪೋಷಣ್ ಟ್ರ್ಯಾಕರ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳ ಕೆಲಸಗಳಿಗಾಗಿ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಬೇಕು. ಇದರಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಸಾಧ್ಯವಾಗಲಿದೆ. ಮೊಟ್ಟೆ ಬಿಲ್, ಗ್ಯಾಸ್ ಬಿಲ್ ಮುಂಗಡವಾಗಿ ಪಾವತಿಸಬೇಕು. ಗೌರವ ಧನವನ್ನು ಪ್ರತಿ ತಿಂಗಳ 5 ನೇ ದಿನಾಂಕದ ಒಳಗಾಗಿ ಜಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಕೋಶಾಧ್ಯಕ್ಷೆ ಸುನಿತಾ ದೊಡ್ಡಮನಿ, ಪ್ರಮುಖರಾದ ಶಾರದಾ ಶಿವಣ್ಣನವರ, ಕಮಲಾಕ್ಷಿ ಹೋತನಹಳ್ಳಿ, ಕುಸುಮಾ ಆಲದಕಟ್ಟಿ, ಗಿರಿಜಾ ದೊಡ್ಡಮನಿ, ಸುಮಿತ್ರಾ ಕೆರೆಕ್ಯಾತನಹಳ್ಳಿ, ಸುಮಂಗಲಾ ಕಮ್ಮಾರ, ಭುವನೇಶ್ವರಿ ಶೆಟ್ಟರ, ರೇಖಾ ವಿಭೂತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.