ADVERTISEMENT

ಸಾಹಿತ್ಯ ಭವನಕ್ಕೆ ಹಣಕಾಸಿನ ನೆರವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 14:40 IST
Last Updated 10 ಜುಲೈ 2022, 14:40 IST
ಹಾವೇರಿ ಜಿಲ್ಲಾ ಸಾಹಿತ್ಯ ಭವನದ ನಿವೇಶನ ಖರೀದಿಗಾಗಿ ಸಾಹಿತಿ ದಿ.ಗಂಗಾಧರ ನಂದಿ ಅವರ ಪುತ್ರ ಡಾ.ರವಿ ನಂದಿ ಅವರು ₹6 ಲಕ್ಷದ ಚೆಕ್‍ ಅನ್ನು ಕಸಾಪ ಪದಾಧಿಕಾರಿಗಳಿಗೆ ನೀಡಿದರು
ಹಾವೇರಿ ಜಿಲ್ಲಾ ಸಾಹಿತ್ಯ ಭವನದ ನಿವೇಶನ ಖರೀದಿಗಾಗಿ ಸಾಹಿತಿ ದಿ.ಗಂಗಾಧರ ನಂದಿ ಅವರ ಪುತ್ರ ಡಾ.ರವಿ ನಂದಿ ಅವರು ₹6 ಲಕ್ಷದ ಚೆಕ್‍ ಅನ್ನು ಕಸಾಪ ಪದಾಧಿಕಾರಿಗಳಿಗೆ ನೀಡಿದರು   

ಹಾವೇರಿ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಸಾಹಿತ್ಯ ಭವನದ ನಿವೇಶನ ಖರೀದಿಗಾಗಿ ಸಾಹಿತಿ, ನಿಕಟಪೂರ್ವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ದಿ.ಗಂಗಾಧರ ನಂದಿ ಸ್ಮರಣಾರ್ಥ ಅವರ ಪುತ್ರ ಡಾ.ರವಿ ನಂದಿ ಅವರು ₹6 ಲಕ್ಷದ ಚೆಕ್‍ ಅನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಅವರಿಗೆ ನೀಡಿದರು.

ಸಹಾಯ ಧನ ಸ್ವೀಕರಿಸಿ ಮಾತನಾಡಿದ ಎಚ್.ಬಿ.ಲಿಂಗಯ್ಯ, ಹಾವೇರಿ ಜಿಲ್ಲಾ ಕೇಂದ್ರವಾಗಿ 25 ವರ್ಷ ಕಳೆದರೂ ಸಾಹಿತ್ಯ ಚಟುವಟಿಕೆಗಳಿಗೆ ಒಂದು ಸಾಹಿತ್ಯ ಭವನದ ಕೊರತೆ ಕಾಡುತ್ತಿತ್ತು. ಆದರೆ ಈಗ ಸಾಹಿತ್ಯ ಸಮ್ಮೇಳನ ನಡೆಯುವ ಈ ಶುಭ ಸಂದರ್ಭದಲ್ಲಿ ಉತ್ತಮ ಪರಿಸರದಲ್ಲಿ 8 ಗುಂಟೆ ನಿವೇಶನ ದೊರೆತಿದೆ. ಆದರೆ ಖರೀದಿಗಾಗಿ ಹಣಕಾಸಿನ ಕೊರೆತೆ ಕಂಡು ಬಂದಿತ್ತು. ಡಾ.ರವಿ ನಂದಿ ಸೇರಿದಂತೆ ಹಲವಾರು ದಾನಿಗಳು ಧನಸಹಾಯ ಮಾಡಲು ಮುಂದೆ ಬಂದಿದ್ದು, ಶೀಘ್ರದಲ್ಲಿ ನಿವೇಶನ ಖರೀದಿಸಿ ಸಾಹಿತ್ಯ ಭವನ ನಿರ್ಮಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ಉದ್ದೇಶಿತ ಸಾಹಿತ್ಯ ಭವನಕ್ಕೆ ಸಾಹಿತಿ ದಿ.ಗಂಗಾಧರ ನಂದಿ ಸಾಹಿತ್ಯ ಭವನ ಎಂದು ನಾಮಕರಣ ಮಾಡಲು ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಠರಾವು ಅಂಗೀಕರಿಸಲಾಗಿದೆ ಎಂದು ಹೇಳಿದರು.

ADVERTISEMENT

ಡಾ.ವಿ.ಪಿ.ದ್ಯಾಮಣ್ಣನವರ, ಮಧುಮತಿ ಚಿಕ್ಕೇಗೌಡರ, ಸುರೇಖಾ ನೇರಳೆಕರ, ಸಂಜಯ ಸುಣಗಾರ, ಲೀಲಾವತಿ ಭೋಜರಾಜ ಪಾಟೀಲ, ದಾಕ್ಷಾಯಣಿ ಗಾಣಗೇರ ಹಾಗೂ ಇಂದುಮತಿ ನೆಲವಿಗಿ ತಲಾ ₹25 ಸಾವಿರ ಧನ ಸಹಾಯ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕ ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಮಾತನಾಡಿ, ನಿವೇಶನ ಖರೀದಿಗಾಗಿ ಇನ್ನೂ ಹೆಚ್ಚಿನ ಹಣಕಾಸಿನ ನೆರವು ಅಗತ್ಯವಾಗಿದ್ದು, ದಾನಿಗಳು ಹೆಚ್ಚಿನ ಧನ ಸಹಾಯ ಮಾಡಿ ಸಾಹಿತ್ಯ ಚಟುವಟಿಕೆಗೆ ಪ್ರೋತ್ಸಾಹಬೇಕೆಂದು ವಿನಂತಿಸಿದರು.

ಡಾ.ರವಿ ನಂದಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೋರಗಲ್, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ಬೇವಿನಮರದ, ಬಿ.ಪಿ.ಶಿಡೇನೂರ, ಎಸ್.ಎನ್.ದೊಡ್ಡಗೌಡರ, ಸಿ.ಎಸ್.ಮರಳಿಹಳ್ಳಿ, ಈರಣ್ಣ ಬೆಳವಡಿ, ಶಿವಬಸವ ಮರಳಿಹಳ್ಳಿ, ರೇಣುಕಾ ಗುಡಿಮನಿ, ಎಂ.ಕೆ. ಭಾಗ್ಯಾ, ಅಕ್ಕಮಹಾದೇವಿ ಹಾನಗಲ್ಲ, ಶಂಕರಣ್ಣ ಬಡಿಗೇರ, ಪೃಥ್ವಿರಾಜ ಬೆಟಗೇರಿ, ಮಾರುತಿ ಶಿಡ್ಲಾಪುರ, ಜಿ.ಎನ್. ಹೂಗಾರ, ನಂದಿ ಕುಟುಂಬ ವರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.