ADVERTISEMENT

ಬೆಂಕಿ ಅವಘಡ: ಯಂತ್ರೋಪಕರಣ ಭಸ್ಮ‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 15:59 IST
Last Updated 14 ಏಪ್ರಿಲ್ 2021, 15:59 IST
ಹಾವೇರಿ ನಗರದ ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವ ವುಡ್‌ ಪ್ಲೇನಿಂಗ್‌ ಮಿಲ್‌ನಲ್ಲಿ ಬೆಂಕಿ ಅವಘಡದಿಂದ ಯಂತ್ರೋಪಕರಣ ಮತ್ತು ಕಟ್ಟಿಗೆಗಳು ಸುಟ್ಟು ಕರಕಲಾಗಿರುವ ದೃಶ್ಯ  
ಹಾವೇರಿ ನಗರದ ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವ ವುಡ್‌ ಪ್ಲೇನಿಂಗ್‌ ಮಿಲ್‌ನಲ್ಲಿ ಬೆಂಕಿ ಅವಘಡದಿಂದ ಯಂತ್ರೋಪಕರಣ ಮತ್ತು ಕಟ್ಟಿಗೆಗಳು ಸುಟ್ಟು ಕರಕಲಾಗಿರುವ ದೃಶ್ಯ     

ಹಾವೇರಿ: ಇಲ್ಲಿನ ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವ ವುಡ್‌ ಪ್ಲೇನಿಂಗ್‌ ಮಿಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆ ಹಾಗೂ ಯಂತ್ರೋಪಕರಣಗಳು ಸಂಪೂರ್ಣವಾಗಿ ಸುಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಈ ಪ್ಲೇನಿಂಗ್‌ ಮಿಲ್‌ಬಸವರಾಜ ಬಣಕಾರ ಎಂಬುವರಿಗೆ ಸೇರಿದೆ.ಯುಗಾದಿ ಹಬ್ಬದ ಅಂಗವಾಗಿ ಮಂಗಳವಾರ ಮಿಲ್‌ ಅನ್ನು ತೆರೆದಿರಲಿಲ್ಲ. ಬೆಳಿಗ್ಗೆ 11ರ ಸುಮಾರಿಗೆ ಬೆಂಕಿ ತಗುಲಿ ಅಕ್ಕ-ಪಕ್ಕದ ಮನೆಗಳಿಗೂ ಬೆಂಕಿ ಆವರಿಸಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.ಅವಘಡದಲ್ಲಿ ₹10 ಲಕ್ಷಕ್ಕೂ ಅಧಿಕ ಮೌಲ್ಯದ ಕಟ್ಟಿಗೆ ಹಾಗೂ ಯಂತ್ರೋಪಕರಣಗಳು ಸುಟ್ಟಿವೆ ಎಂದು ಅಂದಾಜಿಸಲಾಗಿದೆ. ವಿದ್ಯತ್ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿರಬಹುದು ಎನ್ನಲಾಗುತ್ತಿದೆ. ಹಾವೇರಿ ಶಹರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.