
ಕುಮಾರಪಟ್ಟಣ: ವಿಶ್ವದಲ್ಲಿಯೇ ಭಾರತವು ಸುದೀರ್ಘ ಲಿಖಿತ ಸಂವಿಧಾನ ಹೊಂದಿದ್ದು, ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಾಗಿದೆ ಎಂದು ತಾಲ್ಲೂಕು ಬಿಸಿಎಂ ಅಧಿಕಾರಿ ವಿ.ಎಸ್.ಹಿರೇಮಠ ಹೇಳಿದರು.
ಮುದೇನೂರು ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾ ಮಾನವತಾವಾದಿ ಅಂಬೇಡ್ಕರ್ ಅವರು ದೇಶದ ಜನಮಾನಸದಲ್ಲಿ ಆದರ್ಶ ಗುಣಗಳನ್ನು ಬಿತ್ತಿದ್ದಾರೆ. ನೊಂದವರ ಧ್ವನಿಯಾಗಿ ಹೋರಾಟ ನಡೆಸಿದ ಅವರು ಜ್ಞಾನದಾಹಿ ಆಗಿದ್ದರು. ಹೋರಾಟ ಮತ್ತು ಸಂಘಟನೆಯ ಗುಣಗಳನ್ನು ಯುವ ಪೀಳಿಗೆಗೆ ಧಾರೆ ಎರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿಗ್ಗಾವಿಯ ಜೋಡಿ ಬಸವೇಶ್ವರ ಜನಪದ ಕಲಾ ಸಂಸ್ಥೆಯ ಕಲಾವಿದರು ಅಂಬೇಡ್ಕರ್ ಕುರಿತು ಜನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಪುಟ್ಟಕ್ಕನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಇಂದಿರಾ ಗೋವಿಂದಗೌಡ್ರ, ನಾಗರಾಜ ಬಿಳಸನೂರಮಠ, ಮಂಜುಳಾ ಪಾಟೀಲ, ಶಿಕ್ಷಣ ಇಲಾಖೆಯ ಎಂ.ಸಿ ಬಲ್ಲೂರ, ಸಮಾಜ ಕಲ್ಯಾಣ ಇಲಾಖೆಯ ದೇವಲ ನಾಯಕ, ಗಿರೀಶ್ ಮರಿಯಮ್ಮನವರ, ಮುಖ್ಯಶಿಕ್ಷಕ ಪ್ರಕಾಶ ಹೊಸಳ್ಳಿ, ಪಿಡಿಒ ಪ್ರಕಾಶ ಎಂ.ಕೆ., ಕಾರ್ಯದರ್ಶಿ ಹನುಮಂತಪ್ಪ ಹರಿಹರ, ಪುನರ್ ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ನಿರ್ದೇಶಕ ಗಣೇಶ್ ನಂದಿಗಾವಿ, ವಿಜಯ್ ಕೆಳಗಿನಮನಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.