ADVERTISEMENT

ಶಿಗ್ಗಾವಿ | ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಮ್ಯಾಥ್ಯೂ ಸಾಲ್ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 14:30 IST
Last Updated 17 ಸೆಪ್ಟೆಂಬರ್ 2023, 14:30 IST
ಶಿಗ್ಗವಿಯ ಜಾನಪದ ವಿ.ವಿಗೆ ಫ್ರಾನ್ಸ್‌ನ ಸಂಶೋಧಕ ಮ್ಯಾಥ್ಯೂ ಸಾಲ್, ಹರಿಯಾಣದ ಸಂಶೋಧಕಿ ವರ್ಷರಾಣಿ ಭೇಟಿ ನೀಡಿದರು
ಶಿಗ್ಗವಿಯ ಜಾನಪದ ವಿ.ವಿಗೆ ಫ್ರಾನ್ಸ್‌ನ ಸಂಶೋಧಕ ಮ್ಯಾಥ್ಯೂ ಸಾಲ್, ಹರಿಯಾಣದ ಸಂಶೋಧಕಿ ವರ್ಷರಾಣಿ ಭೇಟಿ ನೀಡಿದರು   

ಶಿಗ್ಗಾವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಫ್ರಾನ್ಸ್‌ನ ಫ್ರೆಂಚ್ ರಿಸರ್ಚ್‌ ಇನ್ಸ್‌ಟಿಟ್ಯೂಟ್ ಫಾರ್ ಸಸ್ಟೇನೇಬಲ್ ಡೆವೆಲಪ್‌ಮೆಂಟ್‌ ಸಂಶೋಧಕ ಮ್ಯಾಥ್ಯೂ ಸಾಲ್ ಪೀಟೇರು ಮತ್ತು ಹರಿಯಾಣದ ಸಂಶೋಧಕಿ ವರ್ಷರಾಣಿ ಹಾಗೂ ಹೈದರಾಬಾದ್ ಪ್ಯಾಬ್ ಇಂಡಿಯಾದ ಗೋಪಿಕೃಷ್ಣ ಅವರು ಶನಿವಾರ ಭೇಟಿ ನೀಡಿದರು.

ವಿವಿಯ ಜಾನಪದ ವಸ್ತು ಸಂಗ್ರಹಾಲಯ ವೀಕ್ಷಿಸಿ, ಅನೇಕ ಶೈಕ್ಷಣಿಕ ವಿಷಯಗಳ ಕುರಿತು ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರೊಂದಿಗೆ ಚರ್ಚಿಸಿದರು.

ವಿಶ್ವವಿದ್ಯಾಲಯದಲ್ಲಿನ ತಗರ ಜೋಗಿಗಳು ಮತ್ತು ಸುಡುಗಾಡು ಸಿದ್ಧರ ಪಾರಂಪರಿಕ ಕೌಶಲಗಳು ಹಾಗೂ ವಸ್ತು ಸಂಗ್ರಹಾಲಯ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು. ವಸ್ತು ಸಂಗ್ರಹಾಲಯದಲ್ಲಿರುವ ಲೋಹದ ಹಾಗೂ ಮತ್ತಿತರ ಪರಿಕರಗಳನ್ನು ನೋಡಿ ಆಶ್ಚರ್ಯ ಚಕಿತರಾದರು. ಜಾನಪದ ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ ಕುಲಪತಿಗಳ ಕನಸನ್ನು ಅವರು ಮೆಚ್ಚಿಕೊಂಡರು.

ADVERTISEMENT

ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಜ್ಞಾನ ಭಂಡಾರವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಲು ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿ ಸಿದರು.

ಒಡಂಬಂಡಿಕೆ ಅನ್ವಯ ವಿವಿಯ ವಿದ್ಯಾರ್ಥಿಗಳು ತಮ್ಮ ಜಾನಪದ ಜ್ಞಾನವನ್ನು ಪ್ಯಾರಿಸ್‌ನಲ್ಲಿ ಪ್ರಸ್ತುತ ಪಡಿಸಲು ಅವಕಾಶಗಳನ್ನು ನೀಡುವುದು ಹಾಗೂ ಪ್ಯಾರಿಸ್‌ನ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಜಾನಪದ ವಿವಿಗೆ ಬರಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ಕುಲಪತಿಗಳೊಂದಿಗೆ ಮಾತನಾಡಿದ ಮ್ಯಾಥ್ಯೂ, ಈ ವಿಶ್ವವಿದ್ಯಾಲಯವು ಜಾನಪದ ಪರಂಪರೆಯ ಹೊಸ ಲೋಕವನ್ನೇ ಸೃಷ್ಟಿಸಿರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಪ್ರಶಂಸನೀಯ ಎಂದರು.

ಹರಿಯಾಣದ ಸಂಶೋಧಕಿ ವರ್ಷಾರಾಣಿ, ಹೈದರಾಬಾದ್ ಪ್ಯಾಬ್ ಇಂಡಿಯಾದ ಗೋಪಿಕೃಷ್ಣ,
ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.