ಸವಣೂರು: ಜಿಲ್ಲಾಡಳಿತ ಡಿ.ಜೆ. ನಿರ್ಬಂಧಿಸಿದ ಹಿನ್ನೆಲೆಯಲ್ಲಿ 5ದಿನಗಳಿಗೆ ವಿಸರ್ಜನೆಗೊಳ್ಳಬೇಕಿದ್ದ ಗಣೇಶನ ಮೂರ್ತಿಯನ್ನು 19ನೇ ದಿನವಾದ ಭಾನುವಾರ ವಿಸರ್ಜನೆ ಕೈಗೊಳ್ಳಲಾಯಿತು. ಈ ಮೂಲಕ ಪ್ರಕರಣ ಸುಖಾಂತ್ಯಗೊಂಡಿತು.
ಮೆರವಣಿಗೆ ವೇಳೆ ನಿಗದಿತ ಪ್ರಮಾಣದ ಡಿ.ಜೆ ಸದ್ದಿಗೆ ಅನುವು ಮಾಡಿಕೊಡಲಾಗಿತ್ತು. ಮಧ್ಯಾಹ್ನ ಆರಂಭಗೊಂಡ ಗಣೇಶ ವಿಸರ್ಜನೆಯಲ್ಲಿ ಯುವಕರು ಅತ್ಯಂತ ಸಂಭ್ರಮದಿಂದ ಕುಣಿದು, ಕುಪ್ಪಳಿಸಿದರು. ಯುವತಿಯರು, ಮಹಿಳೆಯರು ಕೂಡ ಅಲ್ಲಲ್ಲಿ ಹೆಜ್ಜೆ ಹಾಕಿದರು.
ಗೌಡ್ರ ಓಣಿಯ ಸವಣೂರ ಅಧಿಪತಿ ಗಣೇಶನ ಮೆರವಣಿಗೆ ಅತ್ಯಂತ ವೈಭವ ಪೂರ್ಣವಾಗಿ ನೆರವೇರಿತು. ಪಟ್ಟಣದ ವಿವಿದೆಡೆ ಪ್ರತಿಷ್ಠಾಪಿಸಿದ್ದ ಗಜಮುಖನ ಮೆರವಣಿಗೆಯಲ್ಲಿ ಯುವಕರು ಹುಚ್ಚೆದ್ದು ಕುಣಿದರು.
ಪ್ರತಿ ವರ್ಷದಂತೆ ಕೋರಿ ಪೇಟೆಯ ಗಣೇಶ ಯುವಕ ಮಂಡಳಿಯವರು ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನ ಸಂತರ್ಪಣೆ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.