ADVERTISEMENT

ತಡಸ | ಸಂಕ್ರಾಂತಿ: ಗಂಗಿಭಾವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:18 IST
Last Updated 15 ಜನವರಿ 2026, 4:18 IST
ಗಂಗೆಭಾವಿಯ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು
ಗಂಗೆಭಾವಿಯ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು   

ತಡಸ: ಸಮೀಪದ ಗಂಗಿಭಾವಿಯ ಉಮಾ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಯೋಗಿರಾಜೇಂದ್ರ ಸ್ವಾಮೀಜಿ–ಗುರುಶಿದ್ದೇಶ್ವರ ಸ್ಳಾಮೀಜಿ ಸ್ಮರಣೋತ್ಸವವು ಜ. 15ರಂದು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಥೋತ್ಸವವೂ ಜರುಗಲಿದೆ.

ಜಾಹ್ನವಿ ಋಷಿಗಳು ತಪಸ್ಸು ಮಾಡಿದ ಸ್ಥಳ ಇದಾಗಿದೆ. ಋಷಿಗಳು ನಿತ್ಯವೂ ವಾಯು ವೇಗದಿಂದ ಕಾಶಿಗೆ ಹೋಗಿ ಅಲ್ಲಿಂದ ಗಂಗಾಜಲ ತಂದು ಗಂಗಿಭಾವಿಯಲ್ಲಿ ಹೂವು ಹರಿದುಕೊಂಡು ರಾಮೇಶ್ವರದ ರಾಮ ಅಂಗ ದೇವರಿಗೆ ಪೂಜೆ ಮಾಡುತ್ತಿದ್ದರು. ಈ ಪುಣ್ಯ ಕ್ಷೇತ್ರದಲ್ಲಿ ಉತ್ತರಾಯಣ ಪರ್ವಕಾಲ ಮಕರ ಸಂಕ್ರಮಣದಂದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.

ಗಂಗಿಭಾವಿಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಈ ವರ್ಷ ಜಾತ್ರೆ ನಡೆಯಲಿದೆ.

ADVERTISEMENT

ಜ. 15ರಂದು ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕವಿದೆ. ಯೋಗಿರಾಜೇಂದ್ರ ಸ್ವಾಮೀಜಿ ಹಾಗೂ ಗವಿಸಿದ್ದೇಶ್ವರ ಗದ್ದುಗೆಗೆ ಪೂಜೆ ನಡೆಯಲಿದೆ. ಮಹಾರುದ್ರಭಿಷೇಕವನ್ನು ಬಸಯ್ಯ ನೆಲ್ಲೂರಮಠ ನೆರವೇರಿಸಲಿದ್ದಾರೆ.

ಮಧ್ಯಾಹ್ನ 1ಗಂಟೆಗೆ ರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಹೊಸೂರ ಗ್ರಾಮದ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗಿಭಾವಿವರೆಗೆ ಜರುಗಲಿದೆ. ಮಧ್ಯಾಹ್ನ 4 ಗಂಟೆಗೆ ರಾಮಲಿಂಗೇಶ್ವರ ರಥೋತ್ಸವವಿದೆ.

ಜ. 16ರಂದು ಪಂಚಾಮೃತ ಅಭಿಷೇಕವಿದೆ. ಸಂಜೆ 4 ಗಂಟೆಗೆ ರಾಮಲಿಂಗೇಶ್ವರ ದೇವರ ತೇರಿಗೆ ಕಡುಬಿನ ಕಾಳಗ ಜರುಗಲಿದೆ.

‘ಧಾರ್ಮಿಕ ಪವಿತ್ರ ಸ್ಥಳವಾದ ಗಂಗಿಭಾವಿಯಲ್ಲಿ ಈ ವರ್ಷವೂ ಸಂಭ್ರಮದಿಂದ ಜಾತ್ರೆ ನಡೆಯಲಿದೆ. ಭಕ್ತರು ಆಗಮಿಸಿ ದೇವರು ಹಾಗೂ ಯೋಗ ರಾಜೇಂದ್ರ ಸ್ವಾಮೀಜಿ ಕೃಪೆಗೆ ಪಾತ್ರರಾಗಬೇಕು’ ಎಂದು ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು ತಿಳಿಸಿದರು.

ಬಂಜಾರ ಸಮುದಾಯದ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ಲಮಾಣಿ, ‘ಗಂಗಿಭಾವಿ ಕ್ಷೇತ್ರವು ಜನರ ರೋಗ ರೋಜಿನಗಳನ್ನು ತೊಳೆದು ಹಾಕುವ ಶಕ್ತಿ ಹೊಂದಿದೆ. ಇಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಪಾವನರಾಗುತ್ತಾರೆಂಬ ನಂಬಿಕೆಯಿದೆ. ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಕೋರಿದ್ದಾರೆ.

ಗಂಗೆಭಾವಿಯ ಮಠದ ಲಿಂ.ರಾಜಗುರು ಬ್ರಹ್ಮಠಾಧೀಶ್ವರಯೋಗಿರಾಜೇಂದ್ರ ಮಹಾಸ್ವಾಮಿಗಳು
ಗಂಗೆಭಾವಿಯ ಶ್ರೀ ಉಮಾರಾಮಲಿಂಗೇಶ್ವರ ದೇವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.