ADVERTISEMENT

ಸರ್ವರಿಗೂ ಉಚಿತ ಲಸಿಕೆ ನೀಡಿ: ಎಸ್‌ಎಫ್‌ಐ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 14:14 IST
Last Updated 30 ಏಪ್ರಿಲ್ 2021, 14:14 IST
ಹಾವೇರಿ ನಗರದಲ್ಲಿ ಶುಕ್ರವಾರ ಎಸ್‌ಎಫ್‌ಐ ಕಾರ್ಯಕರ್ತರು ಪೋಸ್ಟರ್‌ ಪ್ರದರ್ಶಿಸಿ, ಸರ್ವರಿಗೂ ಉಚಿತ ಲಸಿಕೆ ನೀಡಿ ಎಂದು ಒತ್ತಾಯಿಸಿದರು 
ಹಾವೇರಿ ನಗರದಲ್ಲಿ ಶುಕ್ರವಾರ ಎಸ್‌ಎಫ್‌ಐ ಕಾರ್ಯಕರ್ತರು ಪೋಸ್ಟರ್‌ ಪ್ರದರ್ಶಿಸಿ, ಸರ್ವರಿಗೂ ಉಚಿತ ಲಸಿಕೆ ನೀಡಿ ಎಂದು ಒತ್ತಾಯಿಸಿದರು    

ಹಾವೇರಿ: ಸರ್ವರಿಗೂ ಉಚಿತವಾಗಿ ಕೋವಿಡ್‌ ಲಸಿಕೆನೀಡಬೇಕು ಮತ್ತು ದೇಶದ ಜನರಿಗೆ ಅಗತ್ಯವಾದ ಆಮ್ಲಜನಕ, ವೆಂಟಿಲೇಟರ್, ಹಾಸಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಎಸ್‌ಎಫ್‌ಐಕೇಂದ್ರ ಸಮಿತಿ ಕರೆ ನೀಡಿದ ಅಂಗವಾಗಿ ಶುಕ್ರವಾರ ನಗರದಲ್ಲಿ ಜಿಲ್ಲಾ ಸಮಿತಿ ನೇತೃತ್ವದಲ್ಲಿಶಿವಾಜಿನಗರದ ಎಸ್ಎಫ್ಐ ಕಚೇರಿ ಎದುರು ಕಾರ್ಯಕರ್ತರು ಪೋಸ್ಟರ್ ಪ್ರದರ್ಶನ ಮಾಡಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ದೇಶದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರಗೊಳ್ಳುತ್ತಿದೆ. ಲಸಿಕೆಯ ವೆಚ್ಚವನ್ನು ನಾಗರಿಕರ ಮೇಲೆ ಹೇರದೆ, ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು.ರಾಜ್ಯಗಳಿಗೆ ಲಸಿಕೆಗಳನ್ನು ಖಾತರಿಪಡಿಸುವ ಬದ್ಧತೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಲಸಿಕೆ ಕೊರತೆ ಹಿನ್ನೆಲೆಯಲ್ಲಿ ತಯಾರಕರು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಬೆಲೆಗಳನ್ನು ಸುಲಿಗೆ ಮಾಡಲು ಕಾರಣವಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ಕಂಪನಿಗಳ ಹಿತಾಸಕ್ತಿಗೆ ಸರ್ಕಾರ ಮಣಿದರೆ,ಭವಿಷ್ಯದಲ್ಲಿ ಜನರ ಸಾವು–ನೋವುಗಳು ಹೆಚ್ಚಳವಾಗುತ್ತದೆ. ಹೀಗಾಗಿ ಸರ್ವರಿಗೂ ಉಚಿತವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ಅರುಣ್ ಕಡಕೋಳ, ಪ್ರತೀಕ ಪಿ, ನವೀನ ಕೋರಿ, ಕಿರಣ ಎಂ, ಪ್ರಸನ್ನ ಬಿ.ಕೆ, ವೆಂಕಟೇಶ ಕಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.