ADVERTISEMENT

ಜನರ ವಿಶ್ವಾಸ ಕಳೆದುಕೊಂಡ ಸರ್ಕಾರ: ಸುರೇಂದ್ರಸಿಂಗ್ ಕೊಲೋರಿಯಾ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 13:47 IST
Last Updated 31 ಡಿಸೆಂಬರ್ 2021, 13:47 IST
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಎಸ್‌ಪಿ ರಾಜ್ಯ ಉಸ್ತುವಾರಿ ಸುರೇಂದ್ರಸಿಂಗ್ ಕೊಲೋರಿಯಾ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ ಇದ್ದಾರೆ 
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಎಸ್‌ಪಿ ರಾಜ್ಯ ಉಸ್ತುವಾರಿ ಸುರೇಂದ್ರಸಿಂಗ್ ಕೊಲೋರಿಯಾ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ ಇದ್ದಾರೆ    

ಹಾವೇರಿ: ‘ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಶ್ರಮವಹಿಸಿ’ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಸುರೇಂದ್ರಸಿಂಗ್ ಕೊಲೋರಿಯಾ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ಬಡವರ, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಎಸ್ಪಿ ಪಕ್ಷ ಅಗತ್ಯವಾಗಿದೆ. ಮಾಯಾವತಿ ಅವರ ನಾಯಕತ್ವದಲ್ಲಿ ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ದೃಢೀಕರಣ ನಡೆಯಲಿದೆ. ಮುಂದಿನ ದಿನಗಳಲ್ಲಿ ಬಿಎಸ್ಪಿ ಪಕ್ಷ ಆಡಳಿತ ನಡೆಸುವ ಸಾಮರ್ಥ್ಯ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ ಮಾತನಾಡಿ, ‘ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಹುಮ್ಮಸಿನಿಂದ ಕೆಲಸ ಮಾಡಬೇಕಿದೆ. ಸದಸ್ಯತ್ವ ಅಭಿಯಾನ ಪ್ರಮುಖ ಕಾರ್ಯವಾಗಿದ್ದು, ಎಲ್ಲಾ ತಾಲ್ಲೂಕಿನಲ್ಲಿ ಹಲವಾರು ಮುಖಂಡರು ನಮ್ಮ ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ತತ್ವ–ಸಿದ್ಧಾಂತಗಳನ್ನು ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದು ಹೇಳಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ ತೊರವಿ ಮಾತನಾಡಿ, ‘ರಾಜ್ಯದಲ್ಲಿ ಬಿಎಸ್ಪಿ ಪಕ್ಷ ಆಂತರಿಕವಾಗಿ ಬಲಿಷ್ಠವಾಗುತ್ತಿದೆ. ಅಭಿವೃದ್ಧಿ ಹಾಗೂ ಸೇವೆ ಮಂತ್ರದಿಂದ ಪಕ್ಷ ಕಾರ್ಯ ಮಾಡಲಿದೆ’ ಎಂದರು.

ಮುಖಂಡರಾದ ಲಿಯಾಕತ್ ತಿಳಿವಳ್ಳಿ, ಚನ್ನಬಸಯ್ಯ ಕುಡಲಮಠ, ಹಜಮತ್ ಶೇಖ್ ಸೇರಿದಂತೆ ಅನೇಕರು ಇತರೆ ಪಕ್ಷವನ್ನು ತೊರೆದು ಬಿಎಸ್ಪಿ ಸೇರ್ಪಡೆಗೊಂಡರು.

ಮುಖಂಡರಾದ ಎಂ ಕೆ ಮಖಬೂಲ್, ವಿಜಯಕುಮಾರ ವಿರಕ್ತಮಠ, ಎಸ್.ಎಂ. ಗಣಜೂರ, ಎಸ್.ಎಸ್ ಅನಗೊಡಿಮಠ, ಮೂಹೀನ್ ಮುಲ್ಲಾ, ಮಂಜುನಾಥ ಅಲ್ಲಾಪುರ, ಮಾಲತೇಶ ಹಾದಿಮನಿ, ನೀಲಕಂಠಪ್ಪ ಗುಡಗೂರ, ರಮೇಶ ಅಲ್ಲಾಪುರ, ಜಾಫರಸಾಬ್, ಆನಂದ ಅಲ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.