ಹಾವೇರಿ: ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚು ಸೇವೆ ಒದಗಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಗ್ರಾಮ ಒನ್ ಸೇವೆ ಆರಂಭಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಗ್ರಾಮ ಒನ್ ವಾರ್ಷಿಕೋತ್ಸವದಲ್ಲಿ ಕಳೆದ ಏಪ್ರಿಲ್‍ನಿಂದ ಈವರೆಗೆ ಅತಿ ಹೆಚ್ಚು ನಾಗರಿಕ ಸೇವೆಗಳನ್ನು ನೀಡಿ ವಿಶಿಷ್ಟ ಸಾಧನೆ ಮಾಡಿದ ಹಾವೇರಿ ಜಿಲ್ಲೆಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಮುಖ್ಯಮಂತ್ರಿಗಳಿಂದ ಪ್ರಶಂಸನಾ ಪತ್ರ ಸ್ವೀಕರಿಸಿದರು.
ಜಿಲ್ಲೆಯಲ್ಲಿ 2022ರಲ್ಲಿ ಆರಂಭಗೊಂಡ ಗ್ರಾಮ ಒನ್ ಯೋಜನೆಯಡಿ 223 ಪಂಚಾಯಿತಿಗಳಲ್ಲಿ ಜನಸಂಖ್ಯೆ ಆಧಾರದ ಮೇಲೆ ಗ್ರೇಡ್-1 ಪಂಚಾಯಿತಿಗಳಲ್ಲಿ ಎರಡಂತೆ ಹಾಗೂ ಹಾಗೂ ಗ್ರೇಡ-2 ಪಂಚಾಯಿತಿಗಳಲ್ಲಿ ಒಂದರಂತೆ 281 ಗ್ರಾಮ ಒನ್ ಕೇಂದ್ರಗಳು ಅನುಷ್ಠಾನಗೊಂಡಿದ್ದು, ಈ ಪೈಕಿ ವಿವಿಧ ಕಾರಣಕ್ಕಾಗಿ 33 ಗ್ರಾಮ ಒನ್ ಕೇಂದ್ರಗಳ ಪ್ರಾಂಚೈಸಿಗಳ ಪರವಾನಗಿ ರದ್ದುಪಡಿಸಲಾಗಿದೆ. 248 ಗ್ರಾಮ ಒನ್ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ 10,49,756 ಅರ್ಜಿಗಳನ್ನು ನಾಗರಿಕರಿಸಿದ ಸ್ವೀಕರಿಸಿ ಸೇವೆ ಒದಗಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.
ರಾಜ್ಯದ 31 ಜಿಲ್ಲೆಗಳ ಪೈಕಿ ಹಾವೇರಿ ಸಾರ್ವಜನಿಕ ಅರ್ಜಿಗಳ ಸ್ವೀಕಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಸಾಲಿನಲ್ಲಿ ಬೆಳಗಾವಿ, ನಂತರ ವಿಜಯಪುರ ಮುಂಚೂಣಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.