ADVERTISEMENT

ಗುತ್ತಲ ಪ.ಪಂ: ಮಾಳವ್ವ ನೂತನ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:50 IST
Last Updated 6 ಸೆಪ್ಟೆಂಬರ್ 2024, 13:50 IST
ಗುತ್ತಲ ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಮಾಳವ್ವ ಗೊರವರ ಆಯ್ಕೆಯಾದರು
ಗುತ್ತಲ ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಮಾಳವ್ವ ಗೊರವರ ಆಯ್ಕೆಯಾದರು   

ಗುತ್ತಲ: ಪಟ್ಟಣದ ಪಟ್ಟಣ ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಾಳವ್ವ ಗೊರವರ ಆಯ್ಕೆಯಾದರು.

18 ಸದಸ್ಯರನ್ನು ಹೊಂದಿರುವ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ ಮಾಳವ್ವ ಗೊರವರ ಮತ್ತು ಬಿಜೆಪಿಯ ಸಾವಿತ್ರಾ ಘಂಟಿ ನಾಮಪತ್ರ ಸಲ್ಲಿಸಿದ್ದರು. ಶಾಸಕರ ಒಂದು ಮತ ಸೇರಿ 13 ಮತಗಳನ್ನು ಪಡೆದು ಮಾಳವ್ವ ಗೊರವರ ಆಯ್ಕೆಯಾದರು.

ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಸಿ.ಬಿ.ಕುರವತ್ತಿಗೌಡ್ರ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಹಿರೇಮಠ, ಮಲ್ಲಪ್ಪ ಚಿಂದಿ, ಈರಪ್ಪ ಲಮಾಣಿ, ಎಂ.ಎಂ. ಮೈದೂರ, ಮಾದೇಗೌಡ್ರ ಗಾಜಿಗೌಡ್ರ, ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.