ADVERTISEMENT

ಹಂಸಬಾವಿ | ಹೋರಿ ಇರಿತ: ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:52 IST
Last Updated 6 ಮಾರ್ಚ್ 2024, 15:52 IST
 ಪ್ರಶಾಂತ್ ರಾಜನಹಳ್ಳಿ.
 ಪ್ರಶಾಂತ್ ರಾಜನಹಳ್ಳಿ.   

ಹಂಸಬಾವಿ (ಹಾವೇರಿ ಜಿಲ್ಲೆ): ಗ್ರಾಮದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಬ್ಯಾಡಗಿ ತಾಲ್ಲೂಕಿನ ಮತ್ತೂರ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರಶಾಂತ ರಾಜನಹಳ್ಳಿ (16)  ಬುಧವಾರ ಮೃತಪಟ್ಟರು.

‘ಹೋರಿ ಬೆದರಿಸುವ ಹಬ್ಬ ನೋಡಲು ಬಂದಿದ್ದ ಪ್ರಶಾಂತಗೆ ಹೋರಿ ತೀವ್ರವಾಗಿ ತಿವಿದ ಪರಿಣಾಮ ಗಂಭೀರ ಸ್ವರೂಪದ ಗಾಯವಾಯಿತು. ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಹಂಸಭಾವಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT