
ಹಾನಗಲ್: ಬೇಡಿಕೆಗಳ ಈಡೇರಿಗಾಗಿ ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದಸ್ತಾವೇಜು (ಪತ್ರ) ಬರಹಗಾರರ ಮುಷ್ಕರ ಶುಕ್ರವಾರ ಸಂಜೆ ಅಂತ್ಯಗೊಂಡಿದ್ದು, ಮುಂದಿನ ಹೋರಾಟಕ್ಕೆ ಬೆಳೆಗಾವಿಗೆ ತೆರಳುವ ಸಿದ್ಧತೆಗಳು ನಡೆದಿವೆ.
‘ರಾಜ್ಯ ದಸ್ತಾವೇಜು ಬರಹಗಾರರ ಒಕ್ಕೂಟದ ಆದೇಶದ ಮೇರೆಗೆ ಬೆಳಗಾವಿ ಸುವರ್ಣಸೌಧ ಎದುರು ಡಿ. 16 ರಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ’ ಎಂದು ದಸ್ತಾವೇಜು ಬರಹಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಗಾಜೀಪೂರ ಹೇಳಿದರು.
‘ರಾಜ್ಯದಲ್ಲಿ ಸುಮಾರ 16 ಸಾವಿರ ದಸ್ತಾವೇಜು ಬರಹಗಾರರು ಇದ್ದಾರೆ. ಈಗ ಸರ್ಕಾರದ ನೀತಿಯಿಂದ ವೃತ್ತಿಯಲ್ಲಿ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ದಸ್ತಾವೇಜು ಬರಹಗಾರರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಆಗ್ರಹಿಸಿದರು.
ದಸ್ತಾವೇಜು ಬರಹಗಾರರಾದ ಕೆ.ಎಸ್.ಕುಲಕರ್ಣಿ, ನಾಗರಾಜ ಚಂದಾಪೂರ, ಎ.ಎ.ಅತ್ತಾರ, ಎಂ.ಎಚ್.ಗುಲಾಮಲಿಶಾ, ಪಿ.ಎಂ.ಕಬ್ಬೂರ, ಬಿ.ಎಚ್.ರಾಮಜೀ, ಎನ್.ಎಸ್.ಪಾಟೀಲ, ಸುರೇಶ ಮುಸರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.