ಹಾನಗಲ್: ‘ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರಂಗಭೂಮಿ ಕಲೆ ಉಳಿಯಬೇಕು. ರಂಗ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು‘ ಎಂದು ರಂಗಕರ್ಮಿ ಹಾವೇರಿಯ ಕೆ.ಆರ್.ಹಿರೇಮಠ ಅಭಿಪ್ರಾಯಟ್ಟರು.
ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ತಾಲ್ಲೂಕಿನ ನೆಲ್ಲಿಬೀಡ ವ ಕಾಲ್ವೆಕಲ್ಲಾಪುರ ಗ್ರಾಮದಲ್ಲಿ ರಂಗಭೂಮಿ ಕಲಾವಿದರಿಂದ ಪ್ರದರ್ಶನಗೊಂಡ ‘ಸೋತು ಗೆದ್ದ ಸಾದ್ವಿ’ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ವರಸಿದ್ಧಿ ವಿನಾಯಕ ಯುವ ಕಲಾ ಸಂಘದ ಕಲಾವಿದರಿಂದ ಪ್ರಸ್ತುತಗೊಂಡ ನಾಟಕಕ್ಕೆ ಬೆಂಗಳೂರ ನಾಟಕ ಅಕಾಡೆಮಿ ಸಹಕಾರ ನೀಡಿತ್ತು. ರಂಗಕರ್ಮಿ ಬಾಲಚಂದ್ರ ಅಂಬಿಗೇರ ನಿರ್ದೇಶನ ನೀಡಿದ್ದರು. ಮಧುಕುಮಾರ ಎಚ್, ಮುಕುಂದಯ್ಯ, ಶಿವಪುತ್ರಯ್ಯ ಹಿರೇಮಠ ಸಂಗೀತ ನೀಡಿದ್ದರು.
ಇದಕ್ಕೂ ಮುನ್ನ ರಂಗಭೂಮಿಯ ಹಿರಿಯ ಕಲಾವಿದರಿಗೆ ರಂಗ ಗೌರವ ಸಮರ್ಪಿಸಲಾಯಿತು. ಬಸಯ್ಯಸ್ವಾಮಿ ಹಿರೇಮಠ, ಮಾಲತೇಶ ನಿಶೀಮಣ್ಣನವರ, ಬಸವರಾಜ ಕುರವಳ್ಳಿ, ವಿನಾಯಕ ಶೇಟ್, ಪದ್ಮಶ್ರೀ ಶೇಟ್, ಎಸ್.ಬಿ.ಸಪ್ಪಗಾಯಿ, ಮಂಜುನಾಥ ಅಕ್ಕೂರ, ಮಲ್ಲನಗೌಡ ಪಾಟೀಲ, ಚನ್ನಬಸಪ್ಪ ಬಾರ್ಕಿ, ಕುಮಾರ ಕುರುಬರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.