ಹಿರೇಕೆರೂರ: ‘ಮನು ವಿಕಾಸ ಸಂಸ್ಥೆಯು ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಪ್ರಗತಿಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕರ್ಜಗಿಯ ಮನುವಿಕಾಸ ಸಂಸ್ಥೆ ಮತ್ತು ಎಚ್.ಡಿ.ಬಿ.ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಚಾಲನೆ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಭೂಮಿ ಬರಡಾಗಿದೆ. ಕುಡಿಯಲು ನೀರಿಲ್ಲದೆ ಕೆರೆ ಕಟ್ಟೆಗಳು ಖಾಲಿಯಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಕೆರೆಗಳನ್ನು ಅಭಿವೃದ್ಧಿ ಪಡೆಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿರುವುದು ರೈತರಿಗೆ ಉಪಯೋಗವಾಗುತ್ತದೆ‘ ಎಂದು ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಹೇಳಿದರು.
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಸಂಸ್ಥೆಯ ಯೋಜನಾ ಉಪ ನಿರ್ದೇಶಕ ಎಂ.ಜಿ.ಹೆಗಡೆ, ಎಸ್.ಎಸ್.ಪಾಟೀಲ್ ಮಾತನಾಡಿದರು. ಅಶ್ವತ್ ನಾಯ್ಕ್ ಮತ್ತು ಕುಸುಮಾ ಕೋಟ್ಟಿಗದ್ದೆ ನಿರೂಪಿಸಿದರು.
ಸಿದ್ದೇಶ ಎಂ.ಡಿ, ರಾಮಣ್ಣ ಕೆಂಚಳ್ಳೇರ, ಸುಮಾ ಪಾಟೀಲ್, ಮಹೇಶ ಗುಬ್ಬಿ, ಚಂದ್ರಪ್ಪ ಮರಡಿ, ದೇವರಾಜ ನಾಯಕ, ಬಸವರಾಜ ಎಸ್.ಜಿ.ಶಿವಯೋಗಿ ಮುಕ್ರಿ, ವಿನಯ್ ಪಾಟೀಲ್ ಮತ್ತು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.