ADVERTISEMENT

ಹಾವೇರಿ: ಸಹಾಯಕ ಎಂಜಿನಿಯರ್‌ ಬಳಿ 5 ನಿವೇಶನ, 2 ಮನೆ, ₹13.39 ಲಕ್ಷ ನಗದು!

ಸಹಾಯಕ ಎಂಜಿನಿಯರ್‌ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 11:48 IST
Last Updated 17 ಜೂನ್ 2022, 11:48 IST
ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಎಂಜಿನಿಯರ್‌ ಚಂದ್ರಪ್ಪ ಓಲೇಕಾರ್‌ ಮನೆಯಲ್ಲಿ ದೊರೆತ ನಗದು, ಚಿನ್ನಾಭರಣ – ಪ್ರಜಾವಾಣಿ ಚಿತ್ರ
ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಎಂಜಿನಿಯರ್‌ ಚಂದ್ರಪ್ಪ ಓಲೇಕಾರ್‌ ಮನೆಯಲ್ಲಿ ದೊರೆತ ನಗದು, ಚಿನ್ನಾಭರಣ – ಪ್ರಜಾವಾಣಿ ಚಿತ್ರ   

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಎಂಜಿನಿಯರ್‌ ಚಂದ್ರಪ್ಪ ಓಲೇಕಾರ್‌ ಅವರ ಎರಡು ಮನೆಗಳ ಮೇಲೆ ಶುಕ್ರವಾರ ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹದ ದಳ (ಎಸಿಬಿ) ದಾಳಿ ನಡೆಸಿದೆ.

ಚಂದ್ರಪ್ಪ ಓಲೇಕಾರ್‌

ರಾಣೆಬೆನ್ನೂರಿನ ಸಿದ್ಧಾರೂಢ ನಗರ ಮತ್ತು ಬ್ಯಾಡಗಿ ತಾಲ್ಲೂಕಿನ ಆಣೂರು ಗ್ರಾಮದಲ್ಲಿರುವ ಸ್ವಂತ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿಯ ಎರಡು ತಂಡಗಳು ದಾಳಿ ನಡೆಸಿವೆ. ಮನೆಗಳಲ್ಲಿ ₹13.39 ಲಕ್ಷ ನಗದು, 400 ಗ್ರಾಂ ಬಂಗಾರದ ಆಭರಣ, 1600 ಗ್ರಾಂ ಬೆಳ್ಳಿ ಸಾಮಾನು ದೊರೆತಿವೆ.

ಬ್ಯಾಡಗಿ ಮತ್ತು ರಾಣೆಬೆನ್ನೂರಿನಲ್ಲಿ ತಂದೆ ಮತ್ತು ಪತ್ನಿ ಹೆಸರಿನಲ್ಲಿ ಒಟ್ಟು 5 ಖಾಲಿ ನಿವೇಶನಗಳು ಮತ್ತು ಸಿದ್ಧಾರೂಢ ನಗರದಲ್ಲಿ ₹80 ಲಕ್ಷ ಬೆಲೆಬಾಳುವ ಸ್ವಂತ ಮನೆ ಸೇರಿದಂತೆ ಎರಡು ಮನೆ ಹಾಗೂ ರಾಣೆಬೆನ್ನೂರಿನ ಗುಡಗೂರು ಬಳಿ 25 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಆನೂರು ಬಳಿ ಪಿತ್ರಾರ್ಜಿತ ಜಮೀನು ಮತ್ತು 1 ಕೋಳಿ ಫಾರಂ ಇರುವುದು ಬೆಳಕಿಗೆ ಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್‌. ನೇತೃತ್ವದಲ್ಲಿ ದಾಳಿ ನಡೆದಿದೆ. ಪರಿಶೀಲನೆ ಕಾರ್ಯ ಇನ್ನೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.