ADVERTISEMENT

ಚೌಡಯ್ಯನ ಪೀಠ ಶರಣ ಸಂಸ್ಕೃತಿ ಉತ್ಸವ ಜ.14ರಿಂದ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 13:55 IST
Last Updated 12 ಜನವರಿ 2020, 13:55 IST

ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರದಲ್ಲಿ ಜ.14 ಮತ್ತು 15ರಂದು ಶರಣ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಎರಡನೇ ವರ್ಷದ ವಚನ ರಥೋತ್ಸವ,ನಿಜಶರಣ ಅಂಬಿಗರ ಚೌಡಯ್ಯನ 900ನೇ ಸ್ಮರಣೋತ್ಸವ, ಶಾಂತಮುನಿ ಮಹಾಸ್ವಾಮಿಗಳ 4ನೇ ವರ್ಷ ಪುಣ್ಯಸ್ಮರಣೆ, ಶಾಂತ ಭೀಷ್ಮಚೌಡಯ್ಯ ಸ್ವಾಮೀಜಿಯ 3ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗಂಗಾಮತಸ್ಥರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ಉತ್ಸವದ ನಿಮಿತ್ತ ವಿವಿಧ ರಾಜ್ಯದ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲಿವೆ. ಆಸ್ಸಾಂ ರಾಜ್ಯದಿಂದ ಬಿಹು ನೃತ್ಯ, ಮಣಿಪುರದ ಟಾಂಗ್ಯಾ, ಕೇರಳದ ಮೋಹಿನಿ ಅಟ್ಟಂ ಸೇರಿದಂತೆ ವಿವಿಧ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ADVERTISEMENT

ಕೇಂದ್ರ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಮತಾ ಓಜಾ ಅವರೂ ಆಗಮಿಸಲಿದ್ದಾರೆ.ವಿಶೇಷಆಕರ್ಷಣೆಯಾಗಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ಕುದ್ರೋಳಿ ಗಣೇಶ ಅವರಿಂದ ಜಾದು ಪ್ರದರ್ಶನವಿರುತ್ತದೆ.ಜೂನಿಯರ್‌ ರಾಜಕುಮಾರಅಶೋಕ್ ಬಸ್ತಿ ಅವರು ರಸಮಂಜರಿ ಕಾರ್ಯಕ್ರಮವನ್ನು ನೀಡಲಿದ್ದಾರೆ ಎಂದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ರೊಟ್ಟಿ ಜಾತ್ರೆಯನ್ನು ಮಾಡಲಾಗುತ್ತಿದೆ. ಹಾವೇರಿಯಿಂದ ಭಾನುವಾರ ಎರಡು ಟ್ರಾಕ್ಟರ್ ರೊಟ್ಟಿಯನ್ನು ಪೀಠಕ್ಕೆ ಕಳುಹಿಸಲಾಗಿದೆ ಎಂದರು.

ಗುರುಪೀಠದ ಕಾರ್ಯಾಧ್ಯಕ್ಷ ಅಶೋಕ ವಾಲಿಕಾರ, ಬಸವರಾಜ ಕಳಸೂರ, ಕರಬಸಪ್ಪ ಹಳದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.