
ರಾಣೆಬೆನ್ನೂರು: ದೇವಸ್ಥಾನಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಆಧುನಿಕತೆಯಿಂದಾಗಿ ಸಮಾಜದಲ್ಲಿ ದಾನ, ಧರ್ಮ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂದರ್ಭದಲ್ಲಿ ರಾಮರೆಡ್ಡಿ ಗೋಡಿಹಾಳ ದಂಪತಿ ₹ 5 ಲಕ್ಷ ಖರ್ಚು ಮಾಡಿ ಬಸವಣ್ಣ ದೇವರ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಬಡಾಸಂಗಾಪುರದ ಹನುಮಾರೂಢ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕುಸಗೂರು ಗ್ರಾಮದಲ್ಲಿ ಸೋಮವಾರ ಬಸವಣ್ಣ ದೇವರ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ದೇವಸ್ಥಾನವನ್ನು ಸಂಪೂರ್ಣ ಜೀರ್ಣೋದ್ದಾರ ಮಾಡಿದ ಚಂಪಕ್ಕ ರಾಮರಡ್ಡಿ ಗೋಡಿಹಾಳ ದಂಪತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಪ್ರೊ ಕಾಂತೇಶ ಅಂಬಿಗೇರ ಮಾತನಾಡಿ, ಬಸವಣ್ಣನವರು ಆದರ್ಶ ಸಮಾಜ ನಿರ್ಮಾಣ ಮಾಡಲು ಅನುಭವ ಮಂಟಪವನ್ನು ನಿರ್ಮಾಣ ಮಾಡಿ ಎಲ್ಲ ಸಮಾಜದ ಕಾಯಕಗಳು ಪವಿತ್ರವೆಂದು ಹೇಳಿದರು.
ಹುಣಸಿಕಟ್ಟಿಯ ಜಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವೇಶ್ವರ ಕಮಿಟಿಗೆ ಅಧ್ಯಕ್ಷ ಕೃಷ್ಣಾರಡ್ಡಿ ಮೊಟೆಬೆನ್ನೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರ ಮಾಡಿದ ರಾಮರೆಡ್ಡಿ ಗೋಡಿಹಾಳ ದಂಪತಿಯನ್ನು ಸ್ವಾಮೀಜಿ ಅಭಿನಂದಿಸಿದರು.
ಕಾಂತೇಶರಡ್ಡಿ ಗೋಡಿಹಾಳ, ಧರ್ಮರಡ್ಡಿ ಮಾಗೋಡ, ಶಿವಾನಂದ ಕಚ್ಚರವಿ, ಪ್ರಭು ಗೋಡಿಹಾಳ, ಮಲ್ಲೇಶ ಬೆಣ್ಣಿಗೌಡ್ರ, ಶ್ರೀಧರ ಅಗಸಿಬಾಗಿಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.