ಹಾವೇರಿ:ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸಾವಿರಾರು ಕೋಳಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿವೆ.
ಈ ಕೋಳಿ ಫಾರಂ ರಾಜು ಭರಮಗೌಡ್ರ ಎಂಬುವವರಿಗೆ ಸೇರಿದ್ದು, ಸುಮಾರು ಲಕ್ಷಾಂತರ ಮೌಲ್ಯದ ಕೋಳಿಗಳುನೀರುಪಾಲಾಗಿದೆ.
ಅಧಿಕ ಪ್ರಮಾಣದಲ್ಲಿ ಮಳೆಯಿಂದಾಗಿಕೋಳಿ ಫಾರಂಗೆ ನೀರುನುಗ್ಗಿದ ಪರಿಣಾಮ ಈ ಅನಾಹುತ ಸಂಭವಿಸಿದ್ದು,
ಸ್ಥಳಕ್ಕೆ ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಹಿರೆಕೇರೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.