ADVERTISEMENT

ಹಾವೇರಿ: ಕಸ ವಿಲೇವಾರಿ ಟ್ರಾಕ್ಟರ್‌ ಓಡಿಸಿದ ಆರೋಗ್ಯ ನಿರೀಕ್ಷಕ!

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 15:21 IST
Last Updated 11 ಜೂನ್ 2020, 15:21 IST
ಹಾವೇರಿಯಲ್ಲಿ ಗುರುವಾರ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ನಗರಸಭೆಯ ಕಸ ವಿಲೇವಾರಿ ಟ್ರಾಕ್ಟರ್‌ ಓಡಿಸಿದರು 
ಹಾವೇರಿಯಲ್ಲಿ ಗುರುವಾರ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ನಗರಸಭೆಯ ಕಸ ವಿಲೇವಾರಿ ಟ್ರಾಕ್ಟರ್‌ ಓಡಿಸಿದರು    

ಹಾವೇರಿ: ಚಾಲಕರ ಕೊರತೆಯಿಂದನಗರಸಭೆಯ ಕಸ ವಿಲೇವಾರಿ ಟ್ರಾಕ್ಟರ್‌ ಅನ್ನು ಪ್ರಭಾರ ಆರೋಗ್ಯ ನಿರೀಕ್ಷಕರೇ ನಗರದಲ್ಲಿ ಗುರುವಾರ ಚಾಲನೆ ಮಾಡಿದ್ದಾರೆ.

‘ನಗರಸಭೆಯ 91 ಪೌರಕಾರ್ಮಿಕರಲ್ಲಿ 70 ಮಂದಿಗೆ ಈಚೆಗೆ ನೇರ ವೇತನ ಪಾವತಿ ಸೌಲಭ್ಯ ದೊರೆಯಿತು. ಉಳಿದ 21 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಚಾಲಕರ ಕೊರತೆ ಕಾಡುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಹರಡಿತ್ತು. ಆದ ಕಾರಣ ನಾನೇ ಟ್ರಾಕ್ಟರ್‌ ಚಾಲನೆ ಮಾಡಿ ಕಸ ವಿಲೇವಾರಿ ಮಾಡಿದೆ’ ಎಂದು ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ತಿಳಿಸಿದರು.

ನಗರದ ಹಳೇ ಪಿ.ಬಿ.ರಸ್ತೆ, ಜೆ.ಎಚ್‌.ಪಟೇಲ್‌ ಸರ್ಕಲ್‌ನಿಂದ ಕೆ.ಎಲ್‌.ಇ. ಸ್ಕೂಲ್‌ ವರೆಗೆ ಟ್ರಾಕ್ಟರ್‌ ಚಾಲನೆ ಮಾಡಿ ಕಸ ವಿಲೇವಾರಿಗೆ ನೆರವಾಗಿದ್ದಾರೆ. ಇವರ ಸೇವಾ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.