ಹಾವೇರಿ: ಕೊರೊನಾ ಮಹಾಮಾರಿ ನಿರ್ಮೂಲನೆಗಾಗಿಹಾವೇರಿ ನಗರದ ಕೆಪಿಟಿಸಿಎಲ್ ಕಾಲೊನಿಯ ಮಹಿಳೆಯರು ಸೋಮವಾರ ವಿಶೇಷ ಪೂಜೆ ನಡೆಸಿ, ಮಹಾ ಮೃತ್ಯುಂಜಯ ಹೋಮ ಮಾಡಿದರು.
ದೇಶದಿಂದಕೊರೊನಾ ಹೆಮ್ಮಾರಿ ದೂರವಾಗಲಿ, ಜನರಿಗೆ ಆರೋಗ್ಯ ಮತ್ತು ನೆಮ್ಮದಿ ಸಿಗಲಿ ಎಂದು ಕೆಪಿಟಿಸಿಎಲ್ ಹಾಗೂ ಪೊಲೀಸ್ ಇಲಾಖೆ ನೌಕರರ ಪತ್ನಿಯರು ನಡೆದ ಹೋಮ ನಡೆಸಿದರು.ಶಿವನು ಮೃತ್ಯುವಿನಿಂದ ನಮ್ಮನ್ನು ಪಾರು ಮಾಡಲಿ ಎಂದು ಪಾರ್ಥನೆ ಮಾಡಿ, 108 ಬಾರಿ ಮೃತ್ಯುಂಜಯ ಮಂತ್ರಪಠಿಸಿ ವಿಶೇಷ ಪೂಜೆ ಸಲ್ಲಿಸಿದರು.
ಹೋಮ ಮಾಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು. ಹೋಮ ಕಾರ್ಯದಲ್ಲಿ ಸಾವಿತ್ರಿ ಸಿಂಗ್, ನೇತ್ರಾವತಿ, ನಾಗರತ್ನಾ, ತೇಜಸ್ವಿನಿ, ಸುಜಾತಾ, ಲತಾ ಮುಂತಾದವರು ಪಾಲ್ಗೊಂಡಿದ್ದರು. h
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.